ಪ್ರಾತಿನಿಧಿಕ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಪರ್ಯಾಯ ರಾಜಕೀಯ ಚಳವಳಿಗೆ ಚಾಲನೆ ನೀಡಲು ನವಕರ್ನಾಟಕ ನಿರ್ಮಾಣ ಸಮಿತಿಯು ನಿರ್ಧರಿಸಿದ್ದು, ಅದರ ನೀಲನಕ್ಷೆ ‘ಜನತಾ ಪ್ರಣಾಳಿಕೆ’ ಬಿಡುಗಡೆ ಕಾರ್ಯಕ್ರಮ ಜ.20ರಂದು ಬೆಳಿಗ್ಗೆ 11ಕ್ಕೆ ಭಾರತ್ ಸ್ಕೌಟ್ಸ್ ಆ್ಯಂಡ್– ಗೈಡ್ಸ್ ಸಭಾಂಗಣದಲ್ಲಿ ನಡೆಯಲಿದೆ.
ಸಮಿತಿಯ ಸಂಚಾಲಕ ಕೋಡಿಹಳ್ಳಿ ಚಂದ್ರಶೇಖರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕೃಷಿ ನೀತಿ, ಮೀಸಲಾತಿ ನಿಯಮ, ಉದ್ಯೋಗ ನೀತಿ, ಶಿಕ್ಷಣ–ಭಾಷಾ ನೀತಿ, ತೆರಿಗೆ ನೀತಿ, ಅನುದಾನ, ಅಭಿವೃದ್ಧಿ ಪರಿಹಾರ ನಿಧಿ, ಅರಣ್ಯ ನೀತಿ, ಗಡಿ ಸಮಸ್ಯೆ, ನದಿ ವಿವಾದ ಮುಂತಾದ ವಿಚಾರಗಳ್ಲಲಿ ಕರ್ನಾಟಕವು ತಾರತಮ್ಯವನ್ನು ಅನುಭವಿಸುತ್ತಿದೆ. ಇಲ್ಲಿನ ಸಂಸದರು ಅನ್ಯಾಯಗಳ ವಿರುದ್ಧ ಒಂದು ಮಾತನ್ನೂ ಆಡುತ್ತಿಲ್ಲ. ಹೈಕಮಾಂಡ್‌ಗಳ ಆದೇಶಕ್ಕೆ ಗೋಣು ಆಡಿಸುವ ಗೊಂಬೆಗಳಾಗಿದ್ದಾರೆ’ ಎಂದು ಟೀಕಿಸಿದರು.
ಸಮಿತಿಯ ಸಂಚಾಲಕರಾದ ಸಿ.ಎಂ. ಇಬ್ರಾಹಿಂ, ಟಿ.ಎ. ನಾರಾಯಣ ಗೌಡ, ಎಂ.ಗೋಪಿನಾಥ್, ಮಾರಸಂದ್ರ ಮುನಿಯಪ್ಪ, ಪುಟ್ಟರಾಜು, ಮೋಹನ್‌ರಾಜು, ಶಿವರಾಂ, ಎನ್. ಮೂರ್ತಿ, ರಾಧಾಕೃಷ್ಣ, ಆರ್.ಎಂ.ಎನ್. ರಮೇಶ್, ಯೋಗೀಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.