ADVERTISEMENT

ವಿಡಿಯೊ: 800 ವರ್ಷಗಳ ಇತಿಹಾಸದ ಸಪ್ತಮಾತೃಕಾ ದೇವಾಲಯಕ್ಕೆ ಹೊಸ ಕಳೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 16:24 IST
Last Updated 24 ಜನವರಿ 2026, 16:24 IST

ಬೆಂಗಳೂರು ನಗರದ ಅತ್ಯಂತ ಪುರಾತನ ದೇವಸ್ಥಾನಗಳಲ್ಲಿ ಒಂದಾಗಿರುವ ಏಳು ಸುತ್ತಿನ ಕೋಟೆ ಸಪ್ತಮಾತೃಕಾ ಸಹಿತ ಆದಿಶಕ್ತಿ ದೇವಾಲಯ, ಜಿಬಿಎ – ನಗರ ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ನೌಕರರ ವೈಯಕ್ತಿಕ ದೇಣಿಗೆ ಮತ್ತು ನೇತೃತ್ವದಲ್ಲಿ ಜೀರ್ಣೋದ್ಧಾರಗೊಂಡಿದೆ. ಸುಮಾರು 800 ವರ್ಷಗಳ ಇತಿಹಾಸವಿರುವ ಈ ದೇವಾಲಯದ ಆವರಣದಲ್ಲಿ ಮಹಾಗಣಪತಿ, ಸಪ್ತಮಾತೃಕೆಯರು, ಕಾಶಿ ವಿಶ್ವನಾಥ ದಂಪತಿ ಸಮೇತ ಪೋತುರಾಜಸ್ವಾಮಿ, ವಲ್ಲಿ ದೇವಸೇನಾ ಸಮೇತ ಕಾರ್ತೀಕೇಯ, ಆಂಜನೇಯ, ಆದಿ ದೇವತೆಗಳು, ಅಷ್ಟ ದಿಕ್ಪಾಲಕರೊಂದಿಗೆ ನವಗ್ರಹ, ಶನಿ ಮಹಾತ್ಮ ದೇವರುಗಳಿದ್ದು, ಸೂರ್ಯ ಭಗವಾನ್‌ ಮತ್ತು ಕಾಲಭೈರವ ದೇವರ ಮೂರ್ತಿಯನ್ನು ಹೊಸದಾಗಿ ಸ್ಥಾಪಿಸಲಾಗಿದೆ. ಐತಿಹಾಸಿಕ, ವಿಶ್ವವಿಖ್ಯಾತ ಬೆಂಗಳೂರು ಕರಗದ ಸಂದರ್ಭದಲ್ಲಿ ಹಸಿ ಕರಗ ಈ ದೇವಸ್ಥಾನದಲ್ಲಿ ಮೊದಲು ಪೂಜೆ ಸಲ್ಲಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.