
ಬೆಂಗಳೂರು: ಗೃಹ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ರಾಜ್ಯದ ಕುಂದು ಕೊರತೆ ಹಾಗೂ ಮಾನವ ಹಕ್ಕುಗಳ ವಿಭಾಗದ ಎಡಿಜಿಪಿ ದೇವಜ್ಯೋತಿ ರೇ ಮತ್ತು ಬೆಂಗಳೂರಿನ ಹಲಸೂರು ಉಪ ವಿಭಾಗದ ಎಸಿಪಿ ಟಿ.ರಂಗಪ್ಪ ಅವರು ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕದ ಗೌರವಕ್ಕೆ ಪಾತ್ರರಾಗಿದ್ದಾರೆ. ಅದೇ ರೀತಿ 25 ಪೊಲೀಸರಿಗೆ ಅಧಿಕಾರಿಗಳಿಗೆ ಶ್ಲಾಘನೀಯ ಸೇವಾ ಪದಕ ಲಭಿಸಿದೆ.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಇಬ್ಬರಿಗೆ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಹಾಗೂ ಮೂವರಿಗೆ ಶೌರ್ಯ ಪದಕದ ಗೌರವ ಸಂದಿದೆ. ಬೆಂಗಳೂರಿನ ಮೆಯೋ ಹಾಲ್ ಅಗ್ನಿಶಾಮಕ ಠಾಣೆಯ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಗುರುಸ್ವಾಮಿ ಮತ್ತು ಪ್ರಮುಖ ಅಗ್ನಿಶಾಮಕ ಅರುಣ್.ಸಿ.ನಾಯಕ್ ಅವರಿಗೆ ಶ್ಲಾಘನೀಯ ಸೇವಾ ಪದಕ ಲಭಿಸಿದೆ.
ಬೆಂಗಳೂರು ದಕ್ಷಿಣ ವಲಯದ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಕೆ.ವಿ.ಮಂಜುನಾಥ, ಬಾಣಸವಾಡಿ ಅಗ್ನಿಶಾಮಕ ಠಾಣೆಯ ಅಗ್ನಿಶಾಮಕ ಮಲ್ಲಿಕಾರ್ಜುನ ಹಾಗೂ ಮೈಸೂರಿನ ಬನ್ನಿಮಂಟಪ ಅಗ್ನಿಶಾಮಕ ಠಾಣೆಯ ಅಗ್ನಿಶಾಮಕ ಡಿ.ಹೇಮಂತ್ ಕುಮಾರ್ ಅವರು ಶೌರ್ಯ ಪದಕದ ಗೌರವಕ್ಕೆ ಪಾತ್ರರಾಗಿದ್ದಾರೆ.
ಡಾ.ಚೇತನ್ ಸಿಂಗ್ ರಾಥೋರ್; ಉತ್ತರ ವಲಯ ಐಜಿಪಿ
ಅಮಿತ್ ಸಿಂಗ್; ಪೂರ್ವ ವಲಯ ಐಜಿಪಿ
ಸೀಮಾ ಲಾಟ್ಕರ್; ಮೈಸೂರು ನಗರ ಪೊಲೀಸ್ ಕಮಿಷನರ್
ಎಸ್.ಸವಿತಾ; ಡಿಐಜಿಪಿ, ಹೆಚ್ಚುವರಿ ಮಹಾ ಸಮಾದೇಷ್ಟರು, ಗೃಹ ರಕ್ಷಕ ದಳ
ಎಂ.ಪುಟ್ಟಮಾದಯ್ಯ; ಡಿಐಜಿಪಿ ಮತ್ತು ಕಲಬುರಗಿ ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲ
ಎನ್.ನವೀನ್‍ಕುಮಾರ್; ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬಳ್ಳಾರಿ
ಪಿ.ರಾಜ ಇಮಾಮ್ ಖಾಸೀಂ; ಸಿಸಿಬಿ ಡಿಸಿಪಿ, ಬೆಂಗಳೂರು ನಗರ
ಸಿ.ಎ.ಸೈಮನ್; ಎಸ್‍ಪಿ, ಡಿಸಿಆರ್‌ಇ, ಮಂಗಳೂರು
ಎಸ್.ಹಣಮಂತರಾಯ; ಡಿವೈಎಸ್‍ಪಿ, ಲೋಕಾಯುಕ್ತ, ಬೀದರ್
ಎಂ.ಎ.ಮೊಹಮ್ಮದ್; ಇನ್‍ಸ್ಪೆಕ್ಟರ್, ಮಡಿವಾಳ ಠಾಣೆ, ಬೆಂಗಳೂರು ನಗರ
ಸಿ.ಬಿ.ಶಿವಸ್ವಾಮಿ; ಇನ್‍ಸ್ಪೆಕ್ಟರ್, ವಿದ್ಯಾರಣ್ಯಪುರ ಠಾಣೆ, ಬೆಂಗಳೂರು ನಗರ
ಮಹಮ್ಮದ್ ರಫೀಕ್ ಎಂ.ತಹಶೀಲ್ದಾರ್; ಇನ್‍ಸ್ಪೆಕ್ಟರ್, ವಿದ್ಯಾಗಿರಿ ಠಾಣೆ, ಹುಬ್ಬಳ್ಳಿ-ಧಾರವಾಡ ನಗರ
ಬಿ.ಕಾಶಿನಾಥ್; ಆರ್‌ಎಸ್‌ಐ, ಕೆಎಸ್‍ಆರ್‌ಪಿ, ಬೆಂಗಳೂರು
ಶ್ರೀಶೈಲ್ ಕೆ.ಬ್ಯಾಕೋಡ್; ಇನ್‍ಸ್ಪೆಕ್ಟರ್, ಮೂಡಲಗಿ ವೃತ್ತ, ಬೆಳಗಾವಿ ಜಿಲ್ಲೆ
ವಯಲೆಟ್ ಫೆಮಿನಾ; ಸಬ್ ಇನ್‍ಸ್ಪೆಕ್ಟರ್, ಕರಾವಳಿ ಕಾವಲು ಪೊಲೀಸ್ ಠಾಣೆ, ಮಲ್ಪೆ
ಎಚ್.ಕೆ.ಶಕುಂತಲಾ; ಸಬ್ ಇನ್‍ಸ್ಪೆಕ್ಟರ್, ಡಿಎಸ್‍ಬಿ, ಶಿವಮೊಗ್ಗ
ಹರ್ಷ ನಾಗರಾಜ್; ಸಹಾಯಕ ಸಬ್ ಇನ್‍ಸ್ಪೆಕ್ಟರ್, ಹೆಬ್ಬಾಳ ಸಂಚಾರ ಠಾಣೆ, ಬೆಂಗಳೂರು ನಗರ
ಜಿ.ಸಿದ್ದರಾಜು; ಸಹಾಯಕ ಸಬ್ ಇನ್‍ಸ್ಪೆಕ್ಟರ್, ಹುಳಿಮಾವು ಠಾಣೆ, ಬೆಂಗಳೂರು ನಗರ
ಎಚ್. ದೊಡ್ಡ ಈರಪ್ಪ; ಆರ್‌ಎಚ್‍ಸಿ, ಕೆಎಸ್‍ಆರ್‌ಪಿ, ಬೆಂಗಳೂರು
ಬಸವರಾಜ್ ಮ್ಯಾಗೆರಿ; ಹೆಡ್ ಕಾನ್‍ಸ್ಟೆಬಲ್, ನ್ಯೂ ಮಾರ್ಕೆಟ್ ಠಾಣೆ, ಶಿರಸಿ, ಉತ್ತರ ಕನ್ನಡ ಜಿಲ್ಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.