ADVERTISEMENT

ಬೆಂಗಳೂರು: ಐಎಎಸ್ ನಿವೃತ್ತ ಅಧಿಕಾರಿ ಸಿ. ಚಿಕ್ಕಣ್ಣ ನಿಧನ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 13:32 IST
Last Updated 10 ಫೆಬ್ರುವರಿ 2026, 13:32 IST
   

ಬೆಂಗಳೂರು: ಐಎಎಸ್ ನಿವೃತ್ತ ಅಧಿಕಾರಿ ಸಿ. ಚಿಕ್ಕಣ್ಣ(84) ಅವರು ಮಂಗಳವಾರ (ಫೆ.10) ಮಧ್ಯಾಹ್ನ 1 ಗಂಟೆಗೆ ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

1981ನೇ ಬ್ಯಾಚ್‌ನ ಅಧಿಕಾರಿಯಾಗಿದ್ದ ಚಿಕ್ಕಣ್ಣ ಅವರು ಹಲವು ವರ್ಷಗಳ ಕಾಲ ವಿಜಯನಗರ ಕ್ಲಬ್‌ನ ಅಧ್ಯಕ್ಷರಾಗಿದ್ದರು. ಅವರು ದೀರ್ಘಕಾಲದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.

ಚಿಕ್ಕಣ್ಣ ಅವರ ಅಂತಿಮ ಸಂಸ್ಕಾರವನ್ನು ಅವರ ಹುಟ್ಟೂರು ಮಧುಗಿರಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.