ADVERTISEMENT

ಡೆಲಿವರಿ ಬಾಯ್‌ಗಳ ಸುಲಿಗೆ; ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 16:02 IST
Last Updated 5 ಜುಲೈ 2020, 16:02 IST

ಬೆಂಗಳೂರು: ಆಹಾರ ಪೂರೈಕೆ ಮಾಡುವ ಡೆಲಿವರಿ ಬಾಯ್‌ಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

‘ಡಿ.ಜೆ. ಹಳ್ಳಿಯ ಅಬ್ದುಲ್ ವಾಹಿದ್ (23) ಹಾಗೂ ಶಬೀರ್ (25) ಬಂಧಿತರು. ಅವರಿಂದ ಮೂರು ಮೊಬೈಲ್, ಎರಡು ಕಾರು ಹಾಗೂಗಾಂಜಾ ಪೊಟ್ಟಣ ಜಪ್ತಿ ಮಾಡಲಾಗಿದೆ’ ಎಂದು ‍ಪೊಲೀಸರು ಹೇಳಿದರು.

‘ಹಲಸೂರು ಗೇಟ್, ಮಹದೇವಪುರ, ಯಶವಂತಪುರ, ಹೆಣ್ಣೂರು ಸೇರಿದಂತೆ ಹಲವು ಠಾಣೆಗಳ ವ್ಯಾಪ್ತಿಯಲ್ಲಿ ಆರೋಪಿಗಳು ಕೃತ್ಯ ಎಸಗಿದ್ದರು. ಡೆಲಿವರಿ ಬಾಯ್‍ಗಳು ಹಾಗೂ ಬೈಕ್ ಸವಾರರನ್ನು ಅಡ್ಡಗಟ್ಟಿ ಹಲ್ಲೆ ಮಾಡಿ ಹಣ, ಮೊಬೈಲ್, ಬೈಕ್ ಸುಲಿಗೆ ಮಾಡುತ್ತಿದ್ದರು.’

ADVERTISEMENT

‘ಕೃತ್ಯ ಎಸಗಿ ಪರಾರಿಯಾಗಿದ್ದ ಆರೋಪಿಗಳು, ಇತ್ತೀಚೆಗೆ ಬೆಟ್ಟದಾಸನಪುರದ ಬಿಂಗಿಪುರ ರಸ್ತೆಯಲ್ಲಿ ಬೈಕ್‍ನಲ್ಲಿ ಹೊರಟಿದ್ದರು. ಬೈಕ್‌ಗೆ ನೋಂದಣಿ ಫಲಕ ಇಲ್ಲದಿದ್ದರಿಂದ ಅನುಮಾನಗೊಂಡಿದ್ದ ಗಸ್ತು ಸಿಬ್ಬಂದಿ, ಆರೋಪಿಗಳನ್ನು ವಶಕ್ಕೆ ಪಡೆದಿದ್ದರು’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.