ADVERTISEMENT

ಬಾಲಕನಿಗೆ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 23:58 IST
Last Updated 28 ಜುಲೈ 2022, 23:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಅಪೊಲೊ ಆಸ್ಪತ್ರೆಯ ವೈದ್ಯರು ಒಂಬತ್ತು ವರ್ಷದ ಬಾಲಕನಿಗೆ ರೋಬೋಟಿಕ್ ಪೀಡಿಯಾಟ್ರಿಕ್ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದರು.

ಹುಡುಗ ತನ್ನ ಶ್ವಾಸಕೋಶ ಮತ್ತು ಹೃದಯಕ್ಕೆ ಮತ್ತೆಂದೂ ಸರಿಪಡಿಸಲಾಗದಷ್ಟು ಹಾನಿ ಉಂಟಾಗುವ ಅಪಾಯ ಎದುರಿಸುತ್ತಿದ್ದ. ಆಸ್ಪತ್ರೆಯ ರೋಬೋಟಿಕ್ ಮತ್ತು ಕನಿಷ್ಠ ಗಾಯದ ಹೃದಯ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯ ಶಸ್ತ್ರಚಿಕಿತ್ಸಕ ಡಾ.ಸಾತ್ಯಕಿ ನಂಬಲಾ ನೇತೃತ್ವದ ವೈದ್ಯರ ತಂಡವು ಒಂದೂವರೆ ಗಂಟೆಯಲ್ಲಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು.

‘ಒಂಬತ್ತು ವರ್ಷದ ರೋಗಿಯು ಬೆಂಗಳೂರಿನ ಅಪೊಲೊ ಹಾಸ್ಪಿಟಲ್ಸ್‌ಗೆ ಭೇಟಿ ನೀಡಿದಾಗ, ಹೃತ್ಕರ್ಣದ ಸೆಪ್ಟಲ್ ಡಿಫೆಕ್ಟ್ (ಎಎಸ್‌ಡಿ) ಅಥವಾ ಹೆಚ್ಚು ಸಾಮಾನ್ಯವಾಗಿ ತಿಳಿದಿರುವ ರೋಗನಿರ್ಣಯ ಪ್ರಕ್ರಿಯೆ ನೆರವೇರಿಸಲಾಯಿತು. ಹೃದಯದಲ್ಲಿ ರಂಧ್ರ ಇದ್ದರೆ ಪರಿಹರಿಸಲು ಏಕೈಕ ಆಯ್ಕೆ ತೆರೆದ ಹೃದಯದ ಶಸ್ತ್ರಚಿಕಿತ್ಸೆ. ಪ್ರಕರಣದ ಹೆಚ್ಚಿನ ವಿಶ್ಲೇಷಣೆ ಮತ್ತು ಮೌಲ್ಯಮಾಪನದ ನಂತರ, ಬೆಂಗಳೂರಿನ ಅಪೊಲೊ ಹಾಸ್ಪಿಟಲ್ಸ್ ತಜ್ಞರ ತಂಡವು ದೋಷವನ್ನು ರೋಬೋಟಿಕ್ ಮುಚ್ಚುವಿಕೆ ಅಥವಾ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆ ನಡೆಸುವ ನಿರ್ಧಾರಕ್ಕೆ ಬಂದಿತು‘ ಎಂದು ಡಾ. ಸಾತ್ಯಕಿ ನಂಬಲಾ ಮಾಹಿತಿ ನೀಡಿದರು.

ADVERTISEMENT

‘ರೋಬೋಟಿಕ್ ಶಸ್ತ್ರಚಿಕಿತ್ಸೆ ಹೃದಯ ಶಸ್ತ್ರಚಿಕಿತ್ಸಾ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲಾಗಿದೆ. ಶಸ್ತ್ರಚಿಕಿತ್ಸೆ ಬಳಿಕ ಒಂದೇ ದಿನದಲ್ಲಿ ಬಾಲಕ ಆಸ್ಪತ್ರೆಯಿಂದ ಮನೆಗೆ ಹೋದ’ ಎಂದು ಅವರು ಹೇಳಿದರು.

8 ಎಂಎಂ ಪೋರ್ಟ್‌ಗಳ ಮೂಲಕ ಸೇರಿಸಲಾದ ಕ್ಯಾಮೆರಾ ಸಹಾಯದಿಂದ ಬಹು ರೋಬೋಟಿಕ್ ತೋಳುಗಳ ಮೂಲಕ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಇದರಿಂದ ಆಗುವ ಗಾಯಗಳ ಪ್ರಮಾಣ ಕಡಿಮೆ. ಯಾವುದೇ ರಕ್ತದ ನಷ್ಟ ಆಗುವುದಿಲ್ಲ. ಶಸ್ತ್ರಚಿಕಿತ್ಸೆಯ ನಂತರ ನೋವು ನಿವಾರಕಗಳ ಅವಶ್ಯಕತೆಯು ತುಂಬಾ ಕಡಿಮೆಯಾಗಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.