ADVERTISEMENT

ಪಿತ್ತಜನಕಾಂಗ ಕಸಿಗೆ ರೊಬೋಟಿಕ್ ಶಸ್ತ್ರಚಿಕಿತ್ಸೆ

ಮಣಿಪಾಲ್‌ ಆಸ್ಪತ್ರೆಯ ವೈದ್ಯರ ಸಾಧನೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 19:35 IST
Last Updated 17 ಡಿಸೆಂಬರ್ 2019, 19:35 IST

ಬೆಂಗಳೂರು: ‘40 ವರ್ಷದ ವ್ಯಕ್ತಿಯೊಬ್ಬರಿಗೆನಗರದ ಮಣಿಪಾಲ್‌ ಆಸ್ಪತ್ರೆಯ ವೈದ್ಯರು ಪಿತ್ತಜನಕಾಂಗ ಕಸಿ ಸಲುವಾಗಿ ನಡೆಸಿದ ರೊಬೋಟಿಕ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ’ ಎಂದು ಆಸ್ಪತ್ರೆಯಪಿತ್ತ ಜನಕಾಂಗ ಸಲಹಾ ತಜ್ಞ ರವಿಚಂದ್‌ ಸಿದ್ಧಾಚಾರಿ ತಿಳಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೋಗಿ ದೀರ್ಘಕಾಲದಿಂದ ಪಿತ್ತಜನಕಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಅವರಿಗೆ ಪಿತ್ತಜನಕಾಂಗ ಕಸಿ ಮಾಡುವುದು ಅನಿವಾರ್ಯವಾಗಿತ್ತು. 32 ವರ್ಷದ ಮಹಿಳೆಯೊಬ್ಬರು ಅಂಗದಾನ ಮಾಡಿದ್ದು, ರೊಬೋಟಿಕ್ ತಂತ್ರಜ್ಞಾನದ ಮೂಲಕಪಿತ್ತಜನಕಾಂಗ ಕಸಿ ಮಾಡಲಾಗಿದೆ. ದಾನಿಯ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲದಂತೆ ಶಸ್ತ್ರಚಿಕಿತ್ಸೆ ನಡೆದಿದೆ. ಇಬ್ಬರ ಆರೋಗ್ಯ ಮಟ್ಟ ಸುಧಾರಣೆಯಾಗಿದೆ’ ಎಂದು ವಿವರಿಸಿದರು.

‘ಶಸ್ತ್ರಚಿಕಿತ್ಸೆ 10ಗಂಟೆಗಳ ಕಾಲ ನಡೆ ಯಿತು. ಇದಕ್ಕೆ₹25 ಲಕ್ಷದಿಂದ ₹30 ಲಕ್ಷ ವೆಚ್ಚ ಆಗಲಿದೆ.ಸಾಮಾನ್ಯವಾಗಿ ಮೂತ್ರ ಪಿಂಡ, ಹೃದಯ ಮತ್ತು ಸ್ತ್ರೀರೋಗ ಸಮಸ್ಯೆಗಳಿಗೆ ರೊಬೋಟಿಕ್ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಪಿತ್ತಜನಕಾಂಗ ಕಸಿಗೆ ಈ ವಿಧಾನ ಅನುಸರಿಸುವುದು ಅಪರೂಪ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.