ADVERTISEMENT

‘ಗಲಾಟೆಗೆ ಕಾಂಗ್ರೆಸ್‌ ಕೈವಾಡವೇ ಕಾರಣ’: ಮಾಜಿ ಸಚಿವ ರೋಷನ್ ಬೇಗ್ ಆರೋಪ

ಜಮೀರ್‌ಗೆ ನಾನೇಕೆ ಉತ್ತರ ಕೊಡಲಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 21:27 IST
Last Updated 18 ಆಗಸ್ಟ್ 2020, 21:27 IST
ಮಾಜಿ ಸಚಿವ ರೋಷನ್ ಬೇಗ್ ಆರೋಪ
ಮಾಜಿ ಸಚಿವ ರೋಷನ್ ಬೇಗ್ ಆರೋಪ   

ಬೆಂಗಳೂರು: ‘ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕೈವಾಡ ಇದ್ದೇ ಇದೆ’ ಎಂದು ಮಾಜಿ ಸಚಿವ ರೋಷನ್ ಬೇಗ್ ಆರೋಪಿಸಿದ್ದಾರೆ.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಗಲಭೆ ಬಳಿಕ ಬಂಧಿತರಾದವರಲ್ಲಿ ಅಮಾಯಕರೂ ಇರಬಹುದು. ಅಮಾಯಕರನ್ನು ಬಿಡಿ ಎಂದು ನಾನೇ ಹೇಳಿದ್ದೇನೆ. ಆದರೆ, ಮೌಲಾನಾಗಳು ಗೋರಿಪಾಳ್ಯದಿಂದ ಯಾಕೆ ಇಲ್ಲಿಗೆ ಬರಬೇಕಿತ್ತು. ಟಿಪ್ಪು ನಗರದಿಂದ ಡಿ.ಜೆ. ಹಳ್ಳಿಗೆ ಯಾಕೆ ಬರಬೇಕಿತ್ತು’ ಎಂದು ಅವರು ಪ್ರಶ್ನಿಸಿದ್ದಾರೆ.

‘ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಜಮೀರ್‌ಗೆ ಯಾಕೆ ನಾನು ಉತ್ತರಕೊಡಬೇಕು. ನಾನು ಯುವ ಚಳವಳಿಯಿಂದ ಬಂದ ಹಿರಿಯ ನಾಯಕ. ಬೇರೆ ಯಾರಾದರೂ ಹಿರಿಯರು ನನ್ನ ವಿರುದ್ಧ ಮಾತನಾಡಿದರೆ ಉತ್ತರ ಕೊಡುತ್ತಿದ್ದೆ. ಆದರೆ, ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ವಾಚ್‌ಮನ್‌ ಆಗ್ತೀನಿ ಎಂದು ಜಮೀರ್‌ ಅಂದಿದ್ದರು. ಮೊದಲು ಯಡಿಯೂರಪ್ಪ ಮನೆ ಹತ್ತಿರ ಹೋಗಿ ವಾಚ್‌ಮನ್‌ ಆಗಲಿ’ ಎಂದರು.

ADVERTISEMENT

‘ಹಿಂದೆ ಇದೇ ರೀತಿ ಗಲಾಟೆ ಆದಾಗ ನನ್ನ ಜೀವ ಉಳಿಸಿದ್ದು, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಸುದರ್ಶನ್ ಹೊರತು, ಜಮೀರ್ ಅಲ್ಲ. ಇಂಥ ವ್ಯಕ್ತಿಗಳು ಎಲ್ಲಿಯೂ ನನ್ನ ಸಹಾಯಕ್ಕೆ ಬಂದಿಲ್ಲ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.