ADVERTISEMENT

ಫೋಟೊ ಕಳುಹಿಸಿ ಕಿರುಕುಳ: ರೌಡಿ ಬಂಧನ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2022, 21:28 IST
Last Updated 20 ಫೆಬ್ರುವರಿ 2022, 21:28 IST

ಬೆಂಗಳೂರು: ಯುವತಿಯೊಬ್ಬರ ಖಾಸಗಿ ಕ್ಷಣಗಳ ಫೋಟೊಗಳನ್ನು ಅವರ ತಂದೆಗೆ ಕಳುಹಿಸಿ ಕಿರುಕುಳ ನೀಡುತ್ತಿದ್ದ ಆರೋಪದಡಿ ರೌಡಿ ನಂದೀಶ್‌ನನ್ನು ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

‘ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ಯುವತಿಯೊಬ್ಬರು ದೂರು ನೀಡಿದ್ದರು. ಹುಳಿಮಾವು ಠಾಣೆ ರೌಡಿಪಟ್ಟಿಯಲ್ಲಿ ಹೆಸರಿದ್ದ ನಂದೀಶ್‌ನನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಯುವತಿಯು ಸ್ನೇಹಿತರ ಜೊತೆ ಖಾಸಗಿ ಕ್ಷಣಗಳನ್ನು ಕಳೆದಿದ್ದರು. ಅದರ ಫೋಟೊ ಹಾಗೂ ವಿಡಿಯೊ ಇಟ್ಟುಕೊಂಡಿದ್ದ ನಂದೀಶ್, ಯುವತಿಯ ತಂದೆಗೆ ಕಳುಹಿಸಿದ್ದ. ಫೋಟೊ, ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುವುದಾಗಿಯೂ ಯುವತಿಯನ್ನು ಬೆದರಿಸಿದ್ದ.’

ADVERTISEMENT

‘ಆರೋಪಿಯ ಕೃತ್ಯವನ್ನು ಯುವತಿ, ಸ್ನೇಹಿತನೇ ಆದ ರಾಜಕೀಯ ಮುಖಂಡರೊಬ್ಬರ ಮಗನ ಬಳಿ ಹೇಳಿಕೊಂಡಿದ್ದರು. ಆತನ ಜೊತೆ ಠಾಣೆಗೆ ಬಂದು ದೂರು ನೀಡಿದ್ದರು’ ಎಂದೂ ಮೂಲಗಳು ತಿಳಿಸಿವೆ.

ಬೆದರಿಸಲು ಸುಪಾರಿ: ‘ಯುವತಿ ಜೊತೆ ಯುವಕನೊಬ್ಬ ಸಲುಗೆ ಇರಿಸಿಕೊಂಡಿದ್ದ. ವಿಚಾರ ತಿಳಿದ ಯುವಕನ ಪೋಷಕರು, ಯುವತಿಯನ್ನು ದೂರ ಮಾಡಲು ನಂದೀಶ್‌ಗೆ ಸುಪಾರಿ ನೀಡಿದ್ದರೆಂಬ ಮಾಹಿತಿ ಇದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ರೌಡಿ ನಂದೀಶ್, ಯುವಕನ ಜೊತೆಗಿದ್ದ ಖಾಸಗಿ ಕ್ಷಣಗಳ ಫೋಟೊ ಇಟ್ಟುಕೊಂಡು ಯುವತಿಯನ್ನು ಬೆದರಿಸಿದ್ದ. ಯುವಕನಿಂದ ದೂರವಾಗುವಂತೆಯೂ ಕೊಲೆ ಬೆದರಿಕೆ ಹಾಕಿದ್ದ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.