ADVERTISEMENT

ಲಕ್ಷ್ಮಣನ ಹತ್ಯೆ; ಕನ್ಯಾಕುಮಾರಿಯಲ್ಲಿ ಮೊಬೈಲ್

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 20:05 IST
Last Updated 21 ಮಾರ್ಚ್ 2019, 20:05 IST

ಬೆಂಗಳೂರು: ರೌಡಿ ಲಕ್ಷ್ಮಣ್ ಕೊಲೆ ಪ್ರಕರಣದ ಆರೋಪಿಗಳನ್ನು ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಪಡೆದಿದ್ದಾರೆ.

‘ಲಕ್ಷ್ಮಣ್ ಕೊಲೆಗೆ ಮುತ್ತತ್ತಿ ಅರಣ್ಯ ಪ್ರದೇಶದಲ್ಲಿ ಸಂಚು ರೂಪಿಸಿದ್ದ ಆರೋಪಿಗಳು, ಕೃತ್ಯದ ನಂತರ ಕುಕ್ಕೆಸುಬ್ರಹ್ಮಣ್ಯ ಹಾಗೂ ಕನ್ಯಾಕುಮಾರಿಯಲ್ಲಿ ಮೊಬೈಲ್‌, ಸಿಮ್‌ಗಳನ್ನು ಎಸೆದು ಬಂದಿದ್ದಾರೆ. ಮಹಜರು ಪ್ರಕ್ರಿಯೆ ಪೂರ್ಣಗೊಳಿಸಲು ಹಾಗೂ ಮೊಬೈಲ್‌ಗಳನ್ನು ಪತ್ತೆ ಮಾಡಲು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ. ‘ತಮ್ಮ ಪ್ರೀತಿಗೆ ಅಡ್ಡಿಯಾಗಿದ್ದ ಲಕ್ಷ್ಮಣನನ್ನು ಮುಗಿಸುವ ಸಂಬಂಧ, ರೌಡಿ ರೂಪೇಶ್ ಹಾಗೂ ವರ್ಷಿಣಿ ವಾಟ್ಸ್‌ಆ್ಯಪ್‌ನಲ್ಲಿ ಒಂದೂವರೆ ತಿಂಗಳಿನಿಂದ ಚರ್ಚೆ ನಡೆಸಿದ್ದರು. ಆತನನ್ನು ಕೊಲೆ ಮಾಡಿಸಿದ ಬಳಿಕ ಎಲ್ಲ ಸಂದೇಶಗಳನ್ನೂ ಅಳಿಸಿ ಹಾಕಿದ್ದರು. ಆರೋಪಿಗಳ ಮೊಬೈಲ್‌ಗಳನ್ನು ಸೈಬರ್ ಕ್ರೈಂ ವಿಭಾಗಕ್ಕೆ ಕಳುಹಿಸಿ, ಎಲ್ಲ ಸಂದೇಶಗಳನ್ನೂ ವಾಪಸ್ ಪಡೆದಿದ್ದೇವೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT