
ಪ್ರಜಾವಾಣಿ ವಾರ್ತೆ
ನೆಲಮಂಗಲ: ಪಾರ್ಟಿ ನಡೆಸಲು ರೌಡಿಯನ್ನು ಫಾರ್ಮ್ ಹೌಸ್‌ಗೆ ಕರೆಸಿಕೊಂಡು, ಕೊಲೆ ಮಾಡಿ ಆರೋಪಿಗಳು ಪರಾರಿ ಆಗಿದ್ಧಾರೆ.
ನಾಗರಾಜ್ ಅಲಿಯಾಸ್ ಆಟೊ ನಾಗ (32) ಕೊಲೆ ಆದವರು.
ಸಮೀಪದ ನಗರೂರಿನ ಬಾಲಾಜಿ ಫಾರ್ಮ್ ಹೌಸ್‌ನಲ್ಲಿ ಪಾರ್ಟಿ ಮಾಡುತ್ತಿದ್ದಾಗ ಹಣಕಾಸು ವಿಚಾರಕ್ಕೆ ನಾಗರಾಜ್ ಅವರನ್ನು ಮೂರರಿಂದ ನಾಲ್ಕು ಮಂದಿ ಸ್ನೇಹಿತರು ಕೊಲೆ ಮಾಡಿದ್ದಾರೆ. ಕೊಲೆಗೆ ಸಂಚು ರೂಪಿಸಿದ್ದ ಆರೋಪಿಗಳು ನಾಗರಾಜ್ ಅವರಿಗೆ ವಿಪರೀತ ಮದ್ಯ ಕುಡಿಸಿದ್ದರು ಎಂದು ಮೂಲಗಳು ಹೇಳಿವೆ.
ಲಗ್ಗೆರೆ ಮತ್ತು ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ರೌಡಿ ಪಟ್ಟಿಯಲ್ಲಿ ನಾಗರಾಜ್ ಹೆಸರು ಇದೆ. ಅರಿಶಿನಕುಂಟೆಯಲ್ಲಿ ನೆಲಸಿದ್ದ ನಾಗರಾಜ್ ಅವರು ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದರು ಎಂದು ಮೂಲಗಳು ಹೇಳಿವೆ.
ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.