ADVERTISEMENT

ಬೆಂಗಳೂರು:₹17 ಲಕ್ಷ ಆಭರಣವಿದ್ದ ಬ್ಯಾಗ್ ಅನ್ನು ಪ್ರಯಾಣಿಕನಿಗೆ ಹಿಂದಿರುಗಿಸಿದ RPF

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 12:51 IST
Last Updated 9 ಫೆಬ್ರುವರಿ 2026, 12:51 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಯಲಹಂಕ ರೈಲು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಕೆಂಪು ಬಣ್ಣದ ಟ್ರಾಲಿ ಬ್ಯಾಗ್ ಅನ್ನು ಪತ್ತೆಹಚ್ಚಿದ ರೈಲ್ವೆ ರಕ್ಷಣಾ ಪಡೆ (ಆರ್‌.ಪಿ.ಎಫ್‌) ಸಿಬ್ಬಂದಿ, ಅದನ್ನು ಆತನಿಗೆ ಮರಳಿಸಿದ ಘಟನೆ ಜರುಗಿದೆ.

ಭಾನುವಾರ(ಫೆ.8) ರಾತ್ರಿ 8.35 ರ ಸುಮಾರಿಗೆ ರೈಲು ನಿಲ್ದಾಣದಲ್ಲಿ ತನ್ನ ಟ್ರಾಲಿ ಬ್ಯಾಗ್ ಕಳೆದುಹೋಗಿರುವ ಬಗ್ಗೆ ‘ರೈಲ್ ಮದದ್ʼನಲ್ಲಿ ಪ್ರಯಾಣಿಕ ದೂರು ನೀಡಿದ್ದ. ತಕ್ಷಣ ಕಾರ್ಯಪ್ರವೃತ್ತರಾದ ಆರ್‌ಪಿಎಫ್ ಸಿಬ್ಬಂದಿ ರೈಲ್ವೆ ನಿಲ್ದಾಣದ 1 ನೇ ಪ್ಲಾಟ್‌ಫಾರ್ಮ್‌ನಲ್ಲಿ ಶೋಧ ನಡೆಸಿ ವಾರಸುದಾರರಿಲ್ಲದ ಟ್ರಾಲಿ ಬ್ಯಾಗ್ ಪತ್ತೆ ಹಚ್ಚಿದ್ದಾರೆ. ಅದನ್ನು ಸುರಕ್ಷಿತವಾಗಿ ಆರ್‌ಪಿಎಫ್ ಪೋಸ್ಟ್‌ಗೆ ತಲುಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಟ್ರಾಲಿ ಬ್ಯಾಗ್‌ನಲ್ಲಿ ಸುಮಾರು ₹17 ಲಕ್ಷ ಮೌಲ್ಯದ 100 ಗ್ರಾಂ ತೂಕದ ಚಿನ್ನಾಭರಣ ಹಾಗೂ ₹2 ಲಕ್ಷ ನಗದು ಇರುವುದು ಕಂಡುಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

‘ರೈಲ್ ಮದದ್ʼನಲ್ಲಿ ದೂರು ಸಲ್ಲಿಸಿದವರ ವಿವರಗಳು ಮತ್ತು ಆಧಾರ್ ಕಾರ್ಡ್‌ನ ವಿವರಗಳನ್ನು ಪರಿಶೀಲಿಸಿದ ನಂತರ ಸೂಕ್ತ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಿ ಟ್ರಾಲಿ ಬ್ಯಾಗ್ ಮತ್ತು ಅದರಲ್ಲಿರುವ ವಸ್ತುಗಳನ್ನು ಪ್ರಯಾಣಿಕನಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.