ರಾಜರಾಜೇಶ್ವರಿ ನಗರ: ಗೌರಿ-ಗಣೇಶ ಹಬ್ಬದ ಅಂಗವಾಗಿ ಮುಸ್ಲಿಂ ಕುಟುಂಬದ ಜಬೀನಾತಾಜ್ ಮತ್ತು ಕೆ.ಎಸ್.ಪರ್ವೀಜ್ ದಂಪತಿ 5 ಸಾವಿರ ಹಿಂದೂ ಕುಟುಂಬಗಳಿಗೆ ಬಾಗಿನ ನೀಡಿದರು.
ಕಗ್ಗಲೀಪುರ ಮತ್ತು ಕಗ್ಗಲೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಕ್ಕೆ ಭೇಟಿ ನೀಡಿದ ಜಬೀನಾತಾಜ್ ಅವರು, ಕುಂಕುಮ, ಎರಡು ಡಜನ್ ಬಳೆ, ಒಣ ಕೊಬ್ಬರಿ, ಸೀರೆಯನ್ನು ಹೆಣ್ಣು ಮಕ್ಕಳಿಗೆ ನೀಡಿದರು. ಜೊತೆಗೆ ಪುರುಷರಿಗೂ ಶರ್ಟ್, ಪಂಚೆ, ಬನಿಯನ್‌ಗಳನ್ನು ವಿತರಿಸಲಾಯಿತು.
ಜಬೀನಾತಾಜ್ ಮಾತನಾಡಿ, ‘ಹದಿನೈದು ವರ್ಷಗಳಿಂದ ಗೌರಿ-ಗಣೇಶನ ಹಬ್ಬಕ್ಕೆ ಬಾಗಿನ ನೀಡಲಾಗುತ್ತಿದೆ. ಇಲ್ಲಿ ಜಾತಿ, ಧರ್ಮ, ಬಡವ, ಶ್ರೀಮಂತ ಬರುವುದಿಲ್ಲ. ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಜೀವನ ಸಾಗಿಸುವುದೇ ಮಾನವ ಧರ್ಮ’ ಎಂದು ಹೇಳಿದರು.
ಕೆ. ಎಸ್. ಪರ್ವೀಜ್ ಮಾತನಾಡಿ, ‘ಸಹೋದರತ್ವ ಬಾಂಧವ್ಯ ಗಟ್ಟಿಗೊಳಿಸಲು ಹಲವಾರು ವರ್ಷಗಳಿಂದ ತಾಯಂದಿರಿಗೆ ಬಾಗಿನ ನೀಡಲಾಗುತ್ತಿದೆ’ ಎಂದರು.
ಕಗ್ಗಲೀಪುರದಲ್ಲಿ ಮುಸ್ಲಿಂ ಕುಟುಂಬದ ಜಬೀನಾ ತಾಜ್ ಕೆ.ಎಸ್. ಪರ್ವೀಜ್ ದಂಪತಿ ಹಿಂದೂ ಹೆಣ್ಣುಮಕ್ಕಳಿಗೆ ಅರಿಶಿನ ಕುಂಕುಮ ಹೂವುಗಳನ್ನು ನೀಡುವ ಮೂಲಕ ಗೌರಿ-ಗಣೇಶ ಹಬ್ಬಕ್ಕೆ ಬಾಗಿನ ನೀಡಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.