ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಡ್ಯಾಶ್ ಬೋರ್ಡ್‌ನಲ್ಲಿದ್ದ ₹ 3 ಲಕ್ಷ ನಗದು ಕಳ್ಳತನ ಮಾಡಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವೇಂಕಟೇಶ್ವರಯ್ಯ ಲೇಔಟ್ ನಿವಾಸಿ ವೆಂಕಟೇಶ್ ಎಂಬುವರು ಬ್ಯಾಂಕ್‌ನಿಂದ ಮೂರು ಲಕ್ಷ ರೂಪಾಯಿ ಡ್ರಾ ಮಾಡಿ ತಂದಿದ್ದರು. ಕಾರು ಹಿಂಬಾಲಿಸಿಕೊಂಡು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು, ಅವರು ಮನೆಯೊಳಗೆ ಹೋಗಿ ಬರುವ ಐದು ನಿಮಿಷದೊಳಗೆ ಕಾರಿನ ಗಾಜು ಒಡೆದು, ಡ್ಯಾಶ್ ಬೋರ್ಡ್‌ನಲ್ಲಿದ್ದ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.
ಎರಡು ಬೈಕ್‌ನಲ್ಲಿ ಬಂದು ಕಳ್ಳತನ ಮಾಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.