ADVERTISEMENT

ಶಬರಿಮಲೆ ಪ್ರಕರಣದ ಹಿಂದೆ ಕ್ರೈಸ್ತ ಮಿಷನರಿಗಳ ಕೈವಾಡ: ಸೂರ್ಯನಾರಾಯಣ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2018, 19:20 IST
Last Updated 11 ನವೆಂಬರ್ 2018, 19:20 IST
ಪ್ರಾರ್ಥನಾ ಯಾತ್ರೆಯಲ್ಲಿ ಭಾಗವಹಿಸಿದ್ದ ಸದಸ್ಯರು
ಪ್ರಾರ್ಥನಾ ಯಾತ್ರೆಯಲ್ಲಿ ಭಾಗವಹಿಸಿದ್ದ ಸದಸ್ಯರು   

ಬೆಂಗಳೂರು: ‘ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿರುವುದರ ಹಿಂದೆ ಕ್ರೈಸ್ತ ಮಿಷನರಿಗಳ ಕೈವಾಡವಿದೆ’ ಎಂದು ಬಜರಂಗದಳದ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ ಹೇಳಿದರು.

ದೇವಾಲಯ ಪ್ರವೇಶಕ್ಕೆ 10ರಿಂದ 50 ವರ್ಷದ ಮಹಿಳೆಯರಿಗೆ ಅನುಮತಿ ನೀಡಿರುವುದನ್ನು ಖಂಡಿಸಿ ಸಮನ್ವಯ ಮತ್ತು ಅಯ್ಯಪ್ಪ ಸಮಿತಿ ವತಿಯಿಂದ ಕಾಡುಗೋಡಿಯಲ್ಲಿ ಶಾಂತಿಯುತ ಯಾತ್ರೆ ಮಾಡಲಾಯಿತು.

‘ನೂರಾರು ವರ್ಷಗಳ ಇತಿಹಾಸ ಹೊಂದಿರುವ ದೇವಾಲಯಕ್ಕೆ ಮಹಿಳೆಯರೂ ಹೋಗಬಹುದು ಎಂದು ಹೇಳಿರುವುದರಿಂದ ಹಿಂದೂಗಳ ಭಾವನೆ, ಸಂಪ್ರದಾಯ, ಸಂಸ್ಕೃತಿಗೆ ಧಕ್ಕೆ ಉಂಟಾಗಿದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.