ದಾಬಸ್ ಪೇಟೆ: ಇಲ್ಲಿನ ಲಕ್ಕೂರು ಗ್ರಾಮದಲ್ಲಿನ ಶ್ರೀ ಮಹಾಲಕ್ಷ್ಮೀ ದೇವಾಲಯದಲ್ಲಿ ಅಮ್ಮನವರಿಗೆ ಏರ್ಪಡಿಸಿದ್ದ 'ಸಹಸ್ರ ಕಮಲ ಪುಷ್ಪಾರ್ಚನೆ ಹಾಗೂ ಸಹಸ್ರ ಕಮಲ ಪುಷ್ಪಯಾಗ ಮಹೋತ್ಸವ ಮತ್ತು ಶ್ರೀ ಮಹಾಲಕ್ಷ್ಮೀಯವರ ಪ್ರಾಕಾರೋತ್ಸವ ಗುರುವಾರ ಸಂಪನ್ನಗೊಂಡಿತು.
ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ದೇವಾಲಯದ ಮುಂಭಾಗ ಹೋಮ ಹವನಗಳು ನಡೆದವು. ಮಹಾಮಂಗಳಾರತಿ, ಶಾತ್ತುಮೊರೈ, ತೀರ್ಥಪ್ರಸಾದ ವಿನಿಯೋಗ ನಡೆಯಿತು. ದೇವಾಲಯವನ್ನು ತಳಿರು ತೋರಣ ಹೂ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
‘ಲೋಕ ಕಲ್ಯಾಣರ್ಥವಾಗಿ 14 ವರ್ಷದಿಂದ ಭಕ್ತರ ಸಹಕಾರದಲ್ಲಿ ಈ ಪೂಜಾ ಕಾರ್ಯಕ್ರಮ ಏರ್ಪಡಿಸುತ್ತಾ ಬಂದಿದ್ದೇವೆ. ನಾಡದೇವತೆ ಚಾಮುಂಡೇಶ್ವರಿ ದೇವಿಯಷ್ಟೇ ಶ್ರೀ ಮಹಾಲಕ್ಷ್ಮೀ ಕೂಡ ಶಕ್ತಿ ದೇವತೆ’ ಎಂದು ಅರ್ಚಕ ವೇಣುಗೋಪಾಲ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.