ADVERTISEMENT

12 ವರ್ಷಗಳ ನಂತರ ತುಂಬಿದ ಸ್ಯಾಂಕಿ ಕೆರೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 20:31 IST
Last Updated 22 ಅಕ್ಟೋಬರ್ 2020, 20:31 IST
ತುಂಬಿದ ಸ್ಯಾಂಕಿ ಕೆರೆಗೆ ಬಾಗಿನ ಅರ್ಪಿಸಿದ ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ
ತುಂಬಿದ ಸ್ಯಾಂಕಿ ಕೆರೆಗೆ ಬಾಗಿನ ಅರ್ಪಿಸಿದ ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ   

ಬೆಂಗಳೂರು: 12 ವರ್ಷಗಳ ನಂತರ ಸ್ಯಾಂಕಿ ಕೆರೆ ಭರ್ತಿಯಾಗಿದ್ದು, ಸುತ್ತಮುತ್ತಲ ಜನರ ಸಂತಸಕ್ಕೆ ಕಾರಣವಾಗಿದೆ.

ಸದಾಶಿವನಗರ, ಅರಣ್ಯ ಭವನ ಸುತ್ತಮುತ್ತಲ ಮಳೆ ನೀರ ವ್ಯರ್ಥವಾಗಿ ಹರಿದು ಹೋಗುತ್ತಿತ್ತು.ಇತ್ತೀಚೆಗೆ ಕೆರೆ ಸುತ್ತ ಪಾದಚಾರಿ ಮಾರ್ಗ ಅಭಿವೃದ್ಧಿಪಡಿಸಿದ ಬಿಬಿಎಂಪಿ, ಹೂಳು, ಕಸದಿಂದ ಮುಚ್ಚಿ ಹೋಗಿದ್ದ ಕಾಲುವೆಗಳನ್ನು ಸರಿಪಡಿಸಿದ ಕಾರಣ ಕೆರೆಗೆ ನೀರಿನ ಹರಿದಿದೆ ಎಂದು ಅಧಿಕಾರಿಗಳು ಹೇಳಿದರು.

ಮೈದುಂಬಿದ್ದ ಮತ್ತು ಗುರುವಾರ ಬೆಳಿಗ್ಗೆ ಇಬ್ಬನಿ ಹೊದ್ದಿದ್ದ ಸ್ಯಾಂಕಿ ಕೆರೆಗೆ ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ ಬಾಗಿನ ಅರ್ಪಿಸಿದರು.‌

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.