ADVERTISEMENT

ಸಾಂಸ್ಕೃತಿಕ ಮುನ್ನೋಟ: ಕಾರ್ಯಕ್ರಮಗಳ ವಿವರ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 23:34 IST
Last Updated 19 ನವೆಂಬರ್ 2025, 23:34 IST
ಪುಕ್ಕಟೆ ಸಲಹೆ ನಾಟಕದ ದೃಶ್ಯ
ಪುಕ್ಕಟೆ ಸಲಹೆ ನಾಟಕದ ದೃಶ್ಯ   

‘ಪುಕ್ಕಟೆ ಸಲಹೆ’ ನಾಟಕ ಪ್ರದರ್ಶನ 

ಬೆಂಗಳೂರು: ವಿಶ್ವ ಕಲಾ ಸಂಗಮದಿಂದ ಇದೇ 21ರಂದು ಸಂಜೆ 7ಕ್ಕೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ‘ಪುಕ್ಕಟೆ ಸಲಹೆ’ ನಾಟಕ ಪ್ರದರ್ಶನವಾಗಲಿದೆ. 

ಈ ನಾಟಕವನ್ನು ಎಚ್. ಡುಂಡಿರಾಜ್ ಅವರು ರಚಿಸಿದ್ದು, ಬಿ. ಅಶೋಕ ಅವರು ನಿರ್ದೇಶನ ಮಾಡಿದ್ದಾರೆ. ಪುಕ್ಕಟೆ ಸಲಹೆ ಹಾಸ್ಯನಾಟಕದಲ್ಲಿ ನಿತ್ಯ ಟಿ.ವಿಗಳಲ್ಲಿ ವಿಜೃಂಭಿಸುವ ಜ್ಯೋತಿಷಿಗಳ ಹಾವಳಿಯನ್ನು, ಅವರ ನಿಜಬಣ್ಣ, ಅವಾಂತರಗಳನ್ನು ಹಾಸ್ಯದ ಮೂಲಕ ಪ್ರಸ್ತುತಪಡಿಸಲಾಗಿದೆ.  ಮಾಹಿತಿಗೆ: 99459 77184.

ADVERTISEMENT

ಆಕಾಶವಾಣಿ ಸಂಗೀತ ಸಮ್ಮೇಳನ 22ಕ್ಕೆ 

ಬೆಂಗಳೂರು: ಬೆಂಗಳೂರು ಆಕಾಶವಾಣಿ ಕೇಂದ್ರದಿಂದ ಇದೇ 22ರಂದು ಸಂಜೆ 6ಕ್ಕೆ ಇಂದಿರಾನಗರದ ಸಂಗೀತ ಸಭಾ ಆವರಣದ ಪುರಂದರ ಭವನದಲ್ಲಿ ಆಕಾಶವಾಣಿ ಸಂಗೀತ ಸಮ್ಮೇಳನ ಆಯೋಜಿಸಲಾಗಿದೆ. 

ದೇಶದಾದ್ಯಂತ ಒಂದೇ ಸಮಯದಲ್ಲಿ ನಡೆಯುವ ವಿಶಿಷ್ಟ ಸಮ್ಮೇಳನವಾಗಿದ್ದು, ಇದರಲ್ಲಿ ಬೆಂಗಳೂರು ಸಹೋದರರಾದ ಎಂ.ಬಿ. ಹರಿಹರನ್ ಮತ್ತು ಎಸ್. ಅಶೋಕ್ ಅವರ ಸಂಗೀತ ಕಛೇರಿ ನಡೆಯಲಿದೆ. ಲಕ್ಷ್ಮೀ ನಾಗರಾಜ್‌ ಮತ್ತು ತಂಡದಿಂದ ಲಘು ಸಂಗೀತ ಕಾರ್ಯಕ್ರಮವೂ ಹಮ್ಮಿಕೊಳ್ಳಲಾಗಿದೆ. ಸಂಸದ ಡಾ.ಸಿ.ಎನ್. ಮಂಜುನಾಥ್ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.    

‘ವಂದೇ ಮಾತರಂ’ 150 ವರ್ಷಗಳ ಸಂಭ್ರಮಾಚರಣೆ 

ಬೆಂಗಳೂರು: ‘ವಂದೇ ಮಾತರಂ’ 150 ವರ್ಷಗಳ ಸಂಭ್ರಮಾಚರಣೆಯ ಅಂಗವಾಗಿ ಶ್ರೀ ವೀಣಾವಾಣಿ ಸಂಗೀತ ಶಾಲೆಯಿಂದ ನವೆಂಬರ್‌ 22ರಂದು ಬೆಳಿಗ್ಗೆ 10ಕ್ಕೆ ಬನಶಂಕರಿಯ ಎರಡನೇ ಹಂತದಲ್ಲಿರುವ ಶಾಸಕರ ಕಚೇರಿಯಲ್ಲಿ ಒಂದು ಸಾವಿರ ಕಂಠ ಗಾಯನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಈ ಸಮಾರಂಭದಲ್ಲಿ ಒಂದು ಸಾವಿರ ಮೀಟರ್‌ನ ತ್ರಿವರ್ಣ ಧ್ವಜ ಪ್ರದರ್ಶನ ಹಾಗೂ 100 ಮಂದಿಯಿಂದ ಭರತನಾಟ್ಯ ಪ್ರದರ್ಶನ ಹಾಗೂ 100 ಜನ ಸಂಗೀತ ವಾದ್ಯಗಳನ್ನು ನುಡಿಸಲಿದ್ದಾರೆ. ಗಾಯಕ ವಿಜಯ್ ಪ್ರಕಾಶ್ ಅವರು ಸಮಾರಂಭ ಉದ್ಘಾಟಿಸಲಿದ್ದು, ವಿರೋಧ ಪಕ್ಷದ ನಾಯಕ ಆರ್. ಅಶೋಕ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಶಾಲೆಯ ನಿರ್ದೇಶಕ ಬಾದಮ್ ಗಿರೀಶ್ ಕುಮಾರ್ ತಿಳಿಸಿದ್ದಾರೆ. 

23ಕ್ಕೆ ‘ಮತ್ತೆ ಮುಖ್ಯಮಂತ್ರಿ’ ನಾಟಕ ಪ್ರದರ್ಶನ  

ಬೆಂಗಳೂರು: ಕಲಾ ಗಂಗೋತ್ರಿ ರಂಗ ತಂಡವು ಇದೇ 23ರಂದು ಸಂಜೆ 5.30ಕ್ಕೆ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ‘ಮತ್ತೆ ಮುಖ್ಯಮಂತ್ರಿ’ ರಾಜಕೀಯ ವಿಶೇಷ ನಾಟಕ ಪ್ರದರ್ಶನ ಇದೆ.

ಈ ನಾಟಕವನ್ನು ಕೆ.ವೈ. ನಾರಾಯಣಸ್ವಾಮಿ ರಚಿಸಿದ್ದು, ಬಿ.ವಿ. ರಾಜಾರಾಂ ಅವರು ನಿರ್ದೇಶಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ‘ಮುಖ್ಯಮಂತ್ರಿ’ ಚಂದ್ರು ಅಭಿನಯಿಸಲಿದ್ದಾರೆ. ಕಲಾ ಗಂಗೋತ್ರಿ 55ನೇ ವರ್ಷದ ಅಂಗವಾಗಿ ಮತ್ತೆ ಮುಖ್ಯಮಂತ್ರಿ ನಾಟಕ ಕೃತಿಯನ್ನು ಬಿಡುಗಡೆ ಮಾಡಲಾಗುತ್ತದೆ. ಸಚಿವ ಎಚ್.ಸಿ. ಮಹದೇವಪ್ಪ, ಮಾಜಿ ಶಾಸಕ ವೈ.ಎಸ್.ವಿ. ದತ್ತ, ರಾಜ್ಯಸಭಾ ಮಾಜಿ ಸದಸ್ಯ ಎಲ್. ಹನುಮಂತಯ್ಯ, ಸಾಹಿತಿ ಜಿ. ರಾಮಕೃಷ್ಣ ಭಾಗವಹಿಸಲಿದ್ದಾರೆ. ಸಾರ್ವಜನಿಕರಿಗೆ ಉಚಿವ ಪ್ರವೇಶವಿದೆ ಎಂದು ಆಯೋಜಕರು ತಿಳಿಸಿದ್ದಾರೆ. 

ಮಾಹಿತಿಗೆ: 99723 98931, 99864 83097.

ಬೆಂಗಳೂರು ಸಹೋದರರಾದ ಎಂ.ಬಿ. ಹರಿಹರನ್ ಮತ್ತು ಎಸ್. ಅಶೋಕ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.