ADVERTISEMENT

ಸ್ಯಾಂಟ್ರೊ ರವಿಯನ್ನು ಪುಣೆಯಿಂದ ಗುಜರಾತ್‌ಗೆ ಕರೆಸಿದವರು ಯಾರು?: HDK ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2023, 12:46 IST
Last Updated 14 ಜನವರಿ 2023, 12:46 IST
ಎಚ್‌.ಡಿ ಕುಮಾರಸ್ವಾಮಿ
ಎಚ್‌.ಡಿ ಕುಮಾರಸ್ವಾಮಿ   

ಬೆಂಗಳೂರು: ಪುಣೆಯಲ್ಲಿದ್ದ ಸ್ಯಾಂಟ್ರೊ ರವಿಯನ್ನು ಗುಜರಾತ್‌ಗೆ ಕರೆಸಿದವರು ಯಾರು? ಅಲ್ಲಿ ಬಂಧನಕ್ಕೂ ಮೊದಲು ಆತನಿಗೆ ಏನು ಆಶ್ವಾಸನೆ ನೀಡಲಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

ಪ್ರೆಸ್ ಕ್ಲಬ್‌ನಲ್ಲಿ ಶನಿವಾರ ಆಯೋಜಿಸಿದ್ದ ಮಾಧ್ಯಮ‌ ಸಂವಾದದಲ್ಲಿ ಮಾತನಾಡಿದ ಅವರು, 'ರಾಜ್ಯದಿಂದ ಪರಾರಿಯಾಗಿದ್ದ ರವಿಯನ್ನು ಗುಜರಾತ್‌ಗೆ ಕರೆಸಿಕೊಳ್ಳಲಾಗಿದೆ. ಅಲ್ಲಿ ಆತನನ್ನು ಬಂಧಿಸುವ ಪ್ರಕ್ರಿಯೆ ನಡೆದಿದೆ. ಅಲ್ಲಿಗೆ ಆತನನ್ನು ಕರೆದುಕೊಂಡು ಬಂದವರು ಯಾರು ಎಂಬುದು ಬಹಿರಂಗವಾಗಬೇಕು' ಎಂದರು.

ಸ್ಯಾಂಟ್ರೊ‌ ರವಿಯನ್ನು ಗುಜರಾತ್‌ನಲ್ಲಿ‌ ಬಂಧಿಸುವ ಮೊದಲು ಗೃಹ ಸಚಿವರು ಅಲ್ಲಿಗೆ ಏಕೆ ಹೋಗಿದ್ದರು? ಅವರ ಭೇಟಿಯ ಬಗ್ಗೆ ನನಗೆ ಅನುಮಾನಗಳಿವೆ ಎಂದು ಹೇಳಿದರು.

ADVERTISEMENT

'ನಮ್ಮ ಅವಧಿಯಲ್ಲಿ ಈ ರೀತಿ ದಂಧೆಕೋರರು, ದಲ್ಲಾಳಿಗಳ ಕೈಗೆ ಅಧಿಕಾರಿಗಳ ವರ್ಗಾವಣೆ ಅಧಿಕಾರ ನೀಡಿರಲಿಲ್ಲ. ಬೆಟ್ಟಿಂಗ್ ದಂಧೆಕೋರರು ಸರ್ಕಾರದ ಮೇಲೆ ಹಿಡಿತ ಸಾಧಿಸಿರಲಿಲ್ಲ. ಅಂತಹವರಲ್ಲಿ ಮುಖ್ಯಮಂತ್ರಿ ಕಚೇರಿಯೊಳಕ್ಕೆ ಬಿಟ್ಟುಕೊಂಡಿರಲಿಲ್ಲ' ಎಂದರು‌.‌

ಬಿಜೆಪಿ ಸರ್ಕಾರದ ಸಚಿವರು, ಶಾಸಕರ ವೈಯಕ್ತಿಕ ನಡವಳಿಕೆ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.