ADVERTISEMENT

ಬಿ‍ಪಿಎಲ್ ಕುಟುಂಬಕ್ಕೆ ರಿಯಾಯಿತಿ ದರದಲ್ಲಿ ಶಸ್ತ್ರಚಿಕಿತ್ಸೆ

ಸಪ್ತಗಿರಿ ಆಸ್ಪತ್ರೆಯಲ್ಲಿ ಇಬ್ಬರಿಗೆ ಕೀ ಹೋಲ್ ತೆರೆದ ಹೃದಯ ಸರ್ಜರಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 19:33 IST
Last Updated 31 ಜುಲೈ 2019, 19:33 IST
ಹೃದಯದ ಕವಾಟ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಪಟ್ಟ ರಾಜೇಶ್ ಅವರಿಗೆ ವೈದ್ಯರು ಶುಭಹಾರೈಸಿದರು
ಹೃದಯದ ಕವಾಟ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಪಟ್ಟ ರಾಜೇಶ್ ಅವರಿಗೆ ವೈದ್ಯರು ಶುಭಹಾರೈಸಿದರು   

ಬೆಂಗಳೂರು: ನಗರದಸಪ್ತಗಿರಿ ಆಸ್ಪತ್ರೆಯು ಬಿಪಿಎಲ್ ಕುಟುಂಬದ ಸದಸ್ಯರಿಗೆ ರಿಯಾಯಿತಿ ದರದಲ್ಲಿ ಶಸ್ತ್ರಚಿಕಿತ್ಸೆ ಆರಂಭಿಸಿದ್ದು, ಇಬ್ಬರಿಗೆ ತೆರೆದ ಹೃದಯದ ಕೀ ಹೋಲ್ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಈ ಚಿಕಿತ್ಸೆಗೆ ₹6 ಲಕ್ಷಕ್ಕಿಂತ ಹೆಚ್ಚು ಹಣ ಖರ್ಚಾಗುತ್ತದೆ. ಇದರಿಂದಾಗಿ ಬಡವರಿಗೆ ಈ ಚಿಕಿತ್ಸೆ ಮಾಡಿಸಿಕೊಳ್ಳುವುದು ಕಷ್ಟ. ಹೀಗಾಗಿ, ಆಸ್ಪತ್ರೆ ಕಡಿಮೆ ದರದಲ್ಲಿ ಶಸ್ತ್ರಚಿಕಿತ್ಸೆ ಮಾಡಲಿದೆ. ಸರ್ಕಾರಿ ವಿಮಾ ಸೌಲಭ್ಯ ಹೊಂದಿರುವವರು ಇದರ ಲಾಭ ಪಡೆದುಕೊಳ್ಳಬಹುದು ಎಂದು ಘೋಷಿಸಿದೆ.

ಚಿಕ್ಕಬಾಣಾವರದ ರಾಜೇಶ್ (24) ಎಂಬುವರಿಗೆ ಹೃದಯದ ಕವಾಟ ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ವೈದ್ಯರು ಉಚಿತವಾಗಿ ಮಾಡಿದ್ದಾರೆ.ಪಶ್ಚಿಮ ಬಂಗಾಳದ ರೈತ ಭರತ್ (60) ಎಂಬುವರಿಗೆ ಇದೇ ತಂತ್ರಜ್ಞಾನ ಬಳಸಿ, ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.