ಪೀಣ್ಯ ದಾಸರಹಳ್ಳಿ: ಹಾವನೂರು ಬಡಾವಣೆಯ ಭೂಮಿಕ ಸೇವಾ ಫೌಂಡೇಶನ್‌ನಲ್ಲಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನ ಆಚರಿಸಲಾಯಿತು.
ಗೋವಾದ ಪಣಜಿ ಕ್ಯಾಂಪಲ್ ಸ್ಟೇಡಿಯಂನಲ್ಲಿ ನಡೆದಿದ್ದ 39ನೇ ಟೇಕ್ವಾಂಡೋ ನ್ಯಾಷನಲ್ ಚಾಂಪಿಯನ್‌ಶಿಪ್‌ನಲ್ಲಿ ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಇಂಡ್ಯುವಿಜುವಲ್ ಸ್ಪಾರಿಂಗ್‌ನಲ್ಲಿ (ಫೈಟಿಂಗ್) ಚಿನ್ನದ ಪದಕ ಮತ್ತು ಗುಂಪು ಪ್ಯಾಟರ್ನ್‌ನಲ್ಲಿ ಚಿನ್ನದ ಪದಕ ಹಾಗೂ ಗುಂಪು ಸ್ಪಾರಿಂಗ್‌ನಲ್ಲಿ ಕಂಚಿನ ಪದಕ ಪಡೆದಿದ್ದ ಚಿಕ್ಕಬಾಣಾವರದ ಪೂಜಾಶ್ರೀ ಚಿಕ್ಕಣ್ಣ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ದಾಸರಹಳ್ಳಿ ಕ್ಷೇತ್ರ ಘಟಕ ಕನ್ನಡ ಜಾನಪದ ಪರಿಷತ್ತು ಅಧ್ಯಕ್ಷ ವೈ.ಬಿ.ಎಚ್. ಜಯದೇವ್, ಕನ್ನಡಸೇನೆ ರಾಜ್ಯ ಖಜಾಂಚಿ ರಾಜೇಂದ್ರ ಕಣ್ಣೂರ, ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ಬೆಂಗಳೂರು ನಗರ ಜಿಲ್ಲಾ ಸದಸ್ಯ ಮಹಮ್ಮದ್ ಸಲೀಂ ಅಹಮ್ಮದ್, ಫೌಂಡೇಶನ್ ಸಂಸ್ಥಾಪಕಿ ಲತಾ ಕುಂದರಗಿ, ಗೌರವಾಧ್ಯಕ್ಷ ಗುರುನಾಥ್, ಕಾದಂಬರಿಗಾರ್ತಿ ಮಮತಾ ವಾರನಹಳ್ಳಿ, ವೀರಶೈವ ಮುಖಂಡ ಎಂ.ಎಚ್. ಪಾಟೀಲ್, ಗಾಯಕ ಕೃಷ್ಣಮೂರ್ತಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.