ADVERTISEMENT

ವಿಕಾರಗೊಳ್ಳುತ್ತಿದೆ ಸಾಮಾಜಿಕ ಮನೋಭಾವ: ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ ಬೇಸರ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2023, 15:41 IST
Last Updated 6 ಆಗಸ್ಟ್ 2023, 15:41 IST
ಸಭೆಯಲ್ಲಿ (ಎಡದಿಂದ) ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌ ಕರ್ನಾಟಕದ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ, ಉಪಾಧ್ಯಕ್ಷ ಕೊಂಡಜ್ಜಿ ಬ.ಷಣ್ಮುಖಪ್ಪ, ರಾಷ್ಟ್ರಿಯ ಹೆಚ್ಚುವರಿ ಮುಖ್ಯ ಆಯುಕ್ತ ಎಂ.ಎ. ಖಾಲಿದ್, ರಾಜ್ಯ ಉಪಾಧ್ಯಕ್ಷೆ ಆಶಾ ಪ್ರಸನ್ನ ಕುಮಾರ್ ಹಾಗೂ ಗೈಡ್ಸ್‌ನ ರಾಜ್ಯ ಆಯುಕ್ತೆ ಗೀತಾ ನಟರಾಜ್ ಇದ್ದರು -ಪ್ರಜಾವಾಣಿ ಚಿತ್ರ 
ಸಭೆಯಲ್ಲಿ (ಎಡದಿಂದ) ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌ ಕರ್ನಾಟಕದ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ, ಉಪಾಧ್ಯಕ್ಷ ಕೊಂಡಜ್ಜಿ ಬ.ಷಣ್ಮುಖಪ್ಪ, ರಾಷ್ಟ್ರಿಯ ಹೆಚ್ಚುವರಿ ಮುಖ್ಯ ಆಯುಕ್ತ ಎಂ.ಎ. ಖಾಲಿದ್, ರಾಜ್ಯ ಉಪಾಧ್ಯಕ್ಷೆ ಆಶಾ ಪ್ರಸನ್ನ ಕುಮಾರ್ ಹಾಗೂ ಗೈಡ್ಸ್‌ನ ರಾಜ್ಯ ಆಯುಕ್ತೆ ಗೀತಾ ನಟರಾಜ್ ಇದ್ದರು -ಪ್ರಜಾವಾಣಿ ಚಿತ್ರ    

ಬೆಂಗಳೂರು: ‘ಮಾನವನ ವೈಯಕ್ತಿಕ ಮತ್ತು ಸಾಮಾಜಿಕ ಮನೋಭಾವ ದಿನದಿಂದ ದಿನಕ್ಕೆ ವಿಕಾರಗೊಳ್ಳುತ್ತಿದೆ. ಆದ್ದರಿಂದ ನಮ್ಮ ಸಾಮಾಜಿಕ, ರಾಜಕೀಯ, ಧಾರ್ಮಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆಗಳಿಗೆ ಹುಚ್ಚು ಹಿಡಿದಂತಾಗಿದೆ’ ಎಂದು ಜಾನಪದ ವಿದ್ವಾಂಸ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ ಕರ್ನಾಟಕದ ಸಹಾಯಕ ರಾಜ್ಯ ಆಯುಕ್ತ ಗೊ.ರು.ಚನ್ನಬಸಪ್ಪ ವಿಷಾದಿಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ ಕರ್ನಾಟಕದ ವಿಶೇಷ ರಾಜ್ಯ ಪರಿಷತ್ ಸಭೆ ಉದ್ಘಾಟಿಸಿದ ಅವರು, ‘ಈಗಿನ ದುರ್ಭರ ಸನ್ನಿವೇಶದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌, ರೋಟರಿ, ಲಯನ್ಸ್‌ನಂತಹ ಸ್ವಯಂ ಸೇವಾಸಂಸ್ಥೆಗಳು ನಮಗಿರುವ ಪರಿಹಾರದ ಭರವಸೆಯ ಬೆಳಕಾಗಿವೆ. ಇಂತಹ ಸೇವಾ ಸಂಸ್ಥೆಗಳಲ್ಲಿ ಇರುವವರು ಬಾಹ್ಯ ಒತ್ತಡಗಳಿಗೆ ಮಣಿಯುವುದಿಲ್ಲ‘ ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ರಾಜ್ಯ ಸಂಸ್ಥೆ, ಜಿಲ್ಲಾ ಸಂಸ್ಥೆ ಹಾಗೂ ಸ್ಥಳೀಯ ಸಂಸ್ಥೆಗಳ ಬೈ–ಲಾ ತಿದ್ದುಪಡಿಗೆ ಅನುಮೋದನೆ ಪಡೆಯಲಾಯಿತು. ಸದಸ್ಯತ್ವ, ರಾಜ್ಯ ಪರಿಷತ್ತಿನ ಸಭೆ, ಚುನಾವಣೆ ಸೇರಿ ವಿವಿಧ ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಣ್ಣ ಪುಟ್ಟ ಬದಲಾವಣೆಗಳನ್ನು ತರಲಾಗಿದೆ. 

ADVERTISEMENT

ಬೈ–ಲಾ ತಿದ್ದುಪಡಿ ಬಗ್ಗೆ ವಿವರಿಸಿದ ರಾಜ್ಯ ಕಾರ್ಯದರ್ಶಿ ಕೆ.ಗಂಗಪ್ಪಗೌಡ ಅವರು, ‘ಸಹಕಾರ ಸಂಘಗಳ ಜಿಲ್ಲಾ ನೋಂದಣಾಧಿಕಾರಿ ಆದೇಶದ ಅನ್ವಯ ಬೈ–ಲಾ ಅನ್ನು ಪರಿಷ್ಕರಿಸಲಾಗಿದೆ. ನಮ್ಮ ರಾಷ್ಟ್ರೀಯ ಸಂಸ್ಥೆಯ ಹೊಸ ನಿಯಮಗಳ ಅನ್ವಯ ತುರ್ತು ಸಂದರ್ಭದಲ್ಲಿ ವರ್ಚುವಲ್ ಸಭೆ ಸೇರಿ ಕೆಲವೊಂದು ಸಣ್ಣ ಪುಟ್ಟ ತಿದ್ದುಪಡಿ ತರಲಾಗಿದೆ’ ಎಂದು ಹೇಳಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.