ADVERTISEMENT

ವಿದೇಶಗಳಿಂದ ಬಂದ 7 ಮಂದಿಗೆ ಕೋವಿಡ್ ಸೋಂಕು ದೃಢ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 20:09 IST
Last Updated 23 ಡಿಸೆಂಬರ್ 2021, 20:09 IST
ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈರಿಸ್ಕ್ ದೇಶಗಳಿಂದ ಬಂದಿರುವ ಪ್ರಯಾಣಿಕರಿಗೆ ಆರ್‌ಟಿ ಪಿಸಿಆರ್ ತಪಾಸಣೆ ಮಾಡುತ್ತಿರುವುದು
ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈರಿಸ್ಕ್ ದೇಶಗಳಿಂದ ಬಂದಿರುವ ಪ್ರಯಾಣಿಕರಿಗೆ ಆರ್‌ಟಿ ಪಿಸಿಆರ್ ತಪಾಸಣೆ ಮಾಡುತ್ತಿರುವುದು   

ದೇವನಹಳ್ಳಿ:ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದೇಶಗಳಿಂದ ಬಂದಿರುವ 7 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದ್ದಾರೆ.

ಬುಧವಾರ ರಾತ್ರಿ 11.30ಕ್ಕೆ ಇಂಗ್ಲೆಂಡ್‌ನಿಂದ ಬಂದಿರುವ 35 ವರ್ಷದ ಮಹಿಳೆ, 38 ವರ್ಷದ ಪುರುಷನಿಗೆ ಕೋವಿಡ್ ದೃಢಪಟ್ಟಿದೆ.

ಗುರುವಾರ ಮುಂಜಾನೆ ಬಂದಿರುವ ಪ್ರಯಾಣಿಕರಲ್ಲಿ 79 ವರ್ಷದ ವೃದ್ಧ, 24 ವರ್ಷದ ಪುರುಷ, 11 ವರ್ಷದ ಬಾಲಕಿ, 61 ವರ್ಷದ ಪುರುಷ ಹಾಗೂ ಶಾರ್ಜಾದಿಂದ ಬಂದಿರುವ 19 ವರ್ಷದ ಯುವತಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.