ADVERTISEMENT

ಕಾಸರಗೋಡು ಯವತಿ ಮೇಲೆ ಲೈಂಗಿಕ ದೌರ್ಜನ್ಯ: ಸಿಐಡಿ ತನಿಖೆಗೆ ಸಂಸದೆ ಶೋಭಾ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 9:40 IST
Last Updated 13 ಜನವರಿ 2020, 9:40 IST
ಸಂಸದೆ ಶೋಭಾ ಕರಂದ್ಲಾಜೆ
ಸಂಸದೆ ಶೋಭಾ ಕರಂದ್ಲಾಜೆ   

ಬೆಂಗಳೂರು: ಕಾಸರಗೋಡಿನ ಯುವತಿ ಮೇಲೆ ನಡೆದ ದೌರ್ಜನ್ಯ ಪ್ರಕರಣವನ್ನು ಸಿಐಡಿಗೆ ವಹಿಸಬೇಕು ಎಂದು ಆಗ್ರಹಿಸಿ ಸಂಸದೆ ಶೋಭ ಕರಂದ್ಲಾಜೆ ಡಿಜಿಪಿ ನೀಲಮಣಿರಾಜು ಅವರಿಗೆ ಸೋಮವಾರ ದೂರು ನೀಡಿದರು.

ಬಳಿಕ ಮಾತನಾಡಿದ ಅವರು, ಆರೋಪಿಗಳು ಯುವತಿ ಮೇಲೆ ಬೆಂಗಳೂರು, ಮಂಗಳೂರು, ಕಾಸರಗೋಡಿನಲ್ಲಿ ದೌರ್ಜನ್ಯ ಎಸಗಿದ್ದಾರೆ. ಬೆಂಗಳೂರು ಮೀರಿ ಹೊರ ವ್ಯಾಪ್ತಿಯಲ್ಲಿ ಕೃತ್ಯ ನಡೆದಿರುವುದರಿಂದ ಪ್ರಕರಣವನ್ನು ಬೆಂಗಳೂರು ಪೊಲೀಸರಿಂದ ತನಿಖೆ ನಡೆಸಲು ಸಾಧ್ಯವಿಲ್ಲ ಎಂದರು.

ಆರೋಪಿಗಳು ಯುವತಿ ಕುಟುಂಬವನ್ನು ಮತಾಂತರಕ್ಕೆ ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಶಂಕಿತ ಉಗ್ರರ ಬಂಧನವಾಗಿದೆ. ಆದ್ದರಿಂದ ಈ ಕೃತ್ಯ ಹಾಗೂ ಮತಾಂತರದ ಹಿಂದೆ ದೊಡ್ಡ ಸಂಚಿರುವ ಅನುಮಾನವಿದೆ ಎಂದರು

ADVERTISEMENT

ಮತಾಂತರ ಯತ್ನ ಮತ್ತು ದೌರ್ಜನ್ಯ ಬಗ್ಗೆ ವಿಸೃತ ತನಿಖೆ ಆಗಬೇಕು. ಈ ಕಾರಣಕ್ಕೆ ಸಿಐಡಿ ಡಿಜಿ ಪ್ರವೀಣ್ ಸೂದ್ ಮತ್ತು ಡಿಜಿಪಿ ನೀಲಮಣಿ ರಾಜು ಅವರಿಗೆ ದೂರು ನೀಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.