ADVERTISEMENT

ಲೈಂಗಿಕ ಕಿರುಕುಳ: ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜ್‌ಕುಮಾರ್ ನಿಯೋಜನೆ ರದ್ದು

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2025, 15:56 IST
Last Updated 28 ಆಗಸ್ಟ್ 2025, 15:56 IST
<div class="paragraphs"><p>ಲೈಂಗಿಕ ಕಿರುಕುಳ (ಪ್ರಾತಿನಿಧಿಕ ಚಿತ್ರ)</p></div>

ಲೈಂಗಿಕ ಕಿರುಕುಳ (ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ನೆಲಮಂಗಲ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜ್‌ಕುಮಾರ್‌ ಅವರ ನಿಯೋಜನೆಯನ್ನು (ಕಾರ್ಯನಿರ್ವಹಣಾ ವ್ಯವಸ್ಥೆ) ರದ್ದುಪಡಿಸಿ ಮೂಲ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.

‘ಕಚೇರಿಯಲ್ಲಿ ಜರ್ಕಿನ್‌ ತೆಗೆಸಿ ಲೈಂಗಿಕ ಕಿರುಕುಳ ನೀಡಿದ್ದಾರೆ’ ಎಂದು ಮೋಟಾರು ವಾಹನ ನಿರೀಕ್ಷಕಿ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರಿಗೆ ಸೂಚಿಸಿದ್ದರು.

ADVERTISEMENT

ರಾಜ್‌ಕುಮಾರ್‌ ಅವರಿಗೆ ನೆಲಮಂಗಲ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಮಾಡಿರುವ ನಿಯೋಜನೆ ರದ್ದು ಮಾಡಲಾಗಿದೆ. ಮೂಲ ಕಚೇರಿಯಾದ ಬೆಂಗಳೂರು (ಪಶ್ಚಿಮ) ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಹಿಂತಿರುಗಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಮೋಟಾರು ವಾಹನ ನಿರೀಕ್ಷಕಿಯವರ ನಿಯೋಜನೆಯನ್ನು ರದ್ದು ಮಾಡಿ, ಮೂಲ ಕಚೇರಿಯಾದ ತುಮಕೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಹಿಂದಿರುಗಿಸಿ ಆದೇಶಿಸಿದ್ದಾರೆ.

ಲೈಂಗಿಕ‌ ಕಿರುಕುಳದ ದೂರನ್ನು ಇಲಾಖೆಯ ಆಂತರಿಕ ಮಹಿಳಾ ದೌರ್ಜನ್ಯ ಸಮಿತಿಗೆ ವರ್ಗಾಯಿಸಲಾಗಿದ್ದು, ವಿಚಾರಣೆ ನಡೆಯಲಿದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.