ADVERTISEMENT

ಬಿಡಿಎ ಎಂಜಿನಿಯರಿಂಗ್‌ ಸದಸ್ಯ ಹುದ್ದೆಗೆ ಮತ್ತೆ ಶಾಂತರಾಜಣ್ಣ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 1:55 IST
Last Updated 14 ಆಗಸ್ಟ್ 2024, 1:55 IST
<div class="paragraphs"><p>ಬಿಡಿಎ</p></div>

ಬಿಡಿಎ

   

ಬೆಂಗಳೂರು: ಬಿಡಿಎ ಎಂಜಿನಿಯರಿಂಗ್‌ ಸದಸ್ಯ ಹುದ್ದೆಗೆ ಎಚ್‌.ಆರ್‌. ಶಾಂತರಾಜಣ್ಣ ಅವರನ್ನು ಸರ್ಕಾರ ವರ್ಗಾಯಿಸಿದೆ. ಇದೇ ಹುದ್ದೆಯಿಂದ ವರ್ಗಾವಣೆಯಾದರೂ ಅಧಿಕಾರ ಹಸ್ತಾಂತರಿಸದೇ ಶಾಂತರಾಜಣ್ಣ 
ಕಚೇರಿಯಿಂದ ಜುಲೈ 23ರಂದುನಿರ್ಗಮಿಸಿದ್ದರು.

‘ಬಿಡಿಎಗೆ ಮತ್ತೆ ವರ್ಗಾವಣೆಯಾಗಿ ಬರುವುದಾಗಿ’ ಹೇಳಿದ್ದ ಶಾಂತರಾಜಣ್ಣ ಬಿಡಿಎಯ ಕಾರನ್ನೂ ಹಿಂದಿರುಗಿಸಿರಲಿಲ್ಲ. ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್‌ ಆಗಿದ್ದ ಶಾಂತರಾಜಣ್ಣ ಸ್ಥಳ ನಿರೀಕ್ಷಣೆಯಲ್ಲಿದ್ದರು.

ADVERTISEMENT

ಜುಲೈ 23ರಂದು ಬಿಡಿಎ ಎಂಜಿನಿಯರಿಂಗ್‌ ಸದಸ್ಯರಾಗಿದ್ದ ಅಧಿಕಾರ ವಹಿಸಿಕೊಂಡಿದ್ದ ನಂಜುಂಡಪ್ಪ ಅವರನ್ನು ಸರ್ಕಾರ ವರ್ಗಾಯಿಸಿದ್ದು, ಹುದ್ದೆ ತೋರಿಸಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.