ಬೆಂಗಳೂರು: ಶಿವಾನಂದ ವೃತ್ತದ ಉಕ್ಕಿನ ಮೇಲ್ಸೇತುವೆಯ ಮತ್ತೊಂದು ಭಾಗದಲ್ಲೂ ವಾಹನಗಳ ಸಂಚಾರಕ್ಕೆ ಶೀಘ್ರವೇ ಅನುವು ಮಾಡಿಕೊಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
493 ಮೀಟರ್ ಉದ್ದದ ಮೇಲ್ಸೇತುವೆ ಆಗಸ್ಟ್‌ನಲ್ಲಿ ಉದ್ಘಾಟನೆಗೊಂಡಿದ್ದು, ರಸ್ತೆಯಲ್ಲಿ ಉಬ್ಬುಗಳಿವೆ ಎಂಬ ಕಾರಣಕ್ಕೆ ಒಂದು ಭಾಗದಲ್ಲಿ ವಾಹನ ಸಂಚಾರ ಬಂದ್ ಮಾಡಲಾಯಿತು. ರೇಸ್‌ಕೋರ್ಸ್ ರಸ್ತೆ ಕಡೆಯಿಂದ ವಾಹನಗಳು ಈಗ ಸರ್ವೀಸ್ ರಸ್ತೆಯಲ್ಲೇ ಸಾಗುತ್ತಿವೆ.
ವಾಹನ ಸಂಚಾರಕ್ಕೆ ಮೇಲ್ಸೇತುವೆ ಯೋಗ್ಯವಾಗಿದೆಯೆ ಎಂಬುದರ ಬಗ್ಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಿಂದ(ಐಐಎಸ್‌ಸಿ) ಬಿಬಿಎಂಪಿ ಅಭಿಪ್ರಾಯ ಕೇಳಿತ್ತು. ‘ವರದಿ ಇನ್ನೂ ಬಂದಿಲ್ಲ. ಆದರೆ, ಸೇತುವೆ ರಚನೆಯಲ್ಲಿ ಯಾವುದೇ ದೋಷ ಇಲ್ಲ ಎಂಬ ಅಭಿಪ್ರಾಯ ಇದೆ. ಆದ್ದರಿಂದ ಶೀಘ್ರವೇ ಮತ್ತೊಮ್ಮೆ ಡಾಂಬರ್ ಹಾಕಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.