
ಪೀಣ್ಯ ದಾಸರಹಳ್ಳಿ: ‘ಹಿಂದೂ ಸಮಾಜದ ಏಕತೆ, ಹಿಂದೂ ಸಂಸ್ಕೃತಿಯ ರಕ್ಷಣೆ, ರಾಷ್ಟ್ರೀಯತೆಯ ಜಾಗೃತಿಗಾಗಿ ಹಿಂದೂ ಸಮಾಜೋತ್ಸವ ನಡೆಯುತ್ತಿದೆ’ ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.
ರುಕ್ಮಿಣಿ ನಗರದಲ್ಲಿ ಹಿಂದೂ ಸಮಾಜೋತ್ಸವದ ಶೋಭಾ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತಾಂಬೆಯ ಭಾವಚಿತ್ರ, ನೂರಾರು ಮಹಿಳೆಯರಿಂದ ಪೂರ್ಣ ಕುಂಭ ಕಳಶ, ಭಜನೆ ಮತ್ತು ಕಲಾತಂಡಗಳೊಂದಿಗೆ ಶೋಭಾಯಾತ್ರೆಯು ನಾಗಸಂದ್ರದ ಎಚ್ಎಂಟಿಯ ಬಿಡಿಎ ಮೈದಾನದವರೆಗೂ ನಡೆಯಿತು.
ದಾಸರಹಳ್ಳಿ ಸಮಾಜೋತ್ಸವ ಸಮಿತಿಯ ಅಧ್ಯಕ್ಷ ಸುಧೀರ್, ‘ಕೌಟುಂಬಿಕ ಮೌಲ್ಯಗಳ ಸಂರಕ್ಷಣೆ, ಸಹಬಾಳ್ವೆ, ಪರಿಸರ ಸಂರಕ್ಷಣೆಯ ಜಾಗೃತಿ, ಸ್ವದೇಶಿ ಭಾವದ ಜಾಗೃತಿ ಮತ್ತು ನಾಗರಿಕ ಶಿಷ್ಟಾಚಾರ ವಿಷಯಗಳತ್ತ ಗಮನಹರಿಸಬೇಕು' ಎಂದರು.
ನಾಗಸಂದ್ರ ಶಾಖೆಯ ಶಿವರಾಜ್ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಮಾಜೋತ್ಸವ ಸಮಿತಿಯ ಪ್ರಾಂತ ಅಧಿಕಾರಿ ಬಾಲಕೃಷ್ಣ ಕಿಣಿ, ಸಂಯೋಜಕರಾದ ಅನಂತು, ಸೌಂದರ್ಯ ಭರತ್, ಸತ್ಯವೇಲು ಮತ್ತು ಕೃಷ್ಣಮೂರ್ತಿ, ಬಿಜೆಪಿ ಮುಖಂಡರಾದ ಎಂ.ಕೆ. ಜಗದೀಶ್, ಬೆಲ್ಮಾರ್ ಸುರೇಶ್, ವಿಜಯ್ ಕುಮಾರ್, ಲಾರಿ ಮುನಿರಾಜು ಮುಂತಾದವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.