ADVERTISEMENT

‘ಸುಳ್ಳು ಆಶ್ವಾಸನೆ ನೀಡಿದ್ದರೂ ನೆಮ್ಮದಿ ಇತ್ತು’: ಸರಣಿ ಟ್ವೀಟ್ ಮುಖಾಂತರ ಟೀಕೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 19:49 IST
Last Updated 5 ಜುಲೈ 2020, 19:49 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಕೊರೊನಾ ನಿಯಂತ್ರಣಕ್ಕಾಗಿ ಪ್ರಧಾನಿ ಅವರಿಂದ ಶಹಬ್ಬಾಸ್ ಗಿರಿ ಪಡೆದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಪ್ರತಿದಿನ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಕೊರೊನಾ ನಿಯಂತ್ರಣದ ವೈಫಲ್ಯಗಳ ಸರಣಿ ವರದಿಗಳನ್ನು ತೋರಿಸಿದ್ದರೆ ಪ್ರಧಾನಿ ಇನ್ನಷ್ಟು ಶಹಬ್ಬಾಸ್ಅನ್ನುತ್ತಿದ್ದರೋ ಏನೊ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಗಿ ಟ್ವೀಟ್‌ ಮಾಡಿದ್ದಾರೆ.

ಸರಣಿ ಟ್ವೀಟ್‌ ಮಾಡಿರುವ ಅವರು, ‘ಕೇಂದ್ರದಿಂದ ರಾಜ್ಯಕ್ಕೆ ಎಷ್ಟು ನೆರವು ನೀಡುತ್ತೀರಿ ಎಂದು ಪ್ರಧಾನಿ ಅವರನ್ನು ಕೇಳಬೇಕಿತ್ತಲ್ಲವೇ. ಪಿ.ಎಂ ಕೇರ್ಸ್‌ ನಿಧಿಯಿಂದ ರಾಜ್ಯಕ್ಕೆ ಎಷ್ಟು ದುಡ್ಡು ಕಳಿಸಿದ್ದೀರಿ ಎಂದೂ ವಿಚಾರಿಸಬೇಕಿತ್ತಲ್ಲವೇ. ಸುಳ್ಳು ಆಶ್ವಾಸನೆ ನೀಡಿದ್ದರೂ ನೊಂದ ಜನರಿಗೆ ಸ್ವಲ್ಪ‌ ನೆಮ್ಮದಿ ಸಿಗುತ್ತಿತ್ತು’ ಎಂದೂ ಕುಟುಕಿದ್ದಾರೆ.

ಲೂಟಿ ಹೊಡೆದಿದ್ದರೆ ದಾಖಲೆ ಬಿಡುಗಡೆ ಮಾಡಲಿ ಎಂದು ಸಚಿವ ಶ್ರೀರಾಮುಲು ಹಾಕಿದ ಸವಾಲಿಗೆ ಟ್ವೀಟ್‌ನಲ್ಲಿ ತಿರುಗೇಟು ನೀಡಿರುವ ಸಿದ್ದರಾಮಯ್ಯ, ‘ರಾಮುಲು ಅವರೇ, ಬಳ್ಳಾರಿಯ ನಿಮ್ಮ ಅಣ್ತಮ್ಮಂದಿರು ಇದೇ ರೀತಿ ಸವಾಲು ಹಾಕಿ ಕೊನೆಗೆ ದಾಖಲೆ ಬಿಡುಗಡೆ ಮಾಡಿದಾಗಜೈಲು ಸೇರಿದ್ದರು. ಸವಾಲೆಸೆಯುವಾಗ ಇದು ನಿಮ್ಮ ಗಮನದಲ್ಲಿರಲಿ’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.