ADVERTISEMENT

ಹುರಿಕಾರರಿಗೆ ಅಗತ್ಯ ಸೌಲಭ್ಯ: ಸವಿತಾ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 18:16 IST
Last Updated 20 ಜನವರಿ 2021, 18:16 IST
ರೇಷ್ಮೆ ಮಗ್ಗ ಪರಿಶೀಲಿಸಿದ ಸವಿತಾ ಅಮರಶೆಟ್ಟಿ
ರೇಷ್ಮೆ ಮಗ್ಗ ಪರಿಶೀಲಿಸಿದ ಸವಿತಾ ಅಮರಶೆಟ್ಟಿ   

ಬೆಂಗಳೂರು: ‘ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ರೇಷ್ಮೆ ಹುರಿಕಾರರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಕರ್ನಾಟಕ ರೇಷ್ಮೆ ಮಂಡಳಿ ಬದ್ದವಾಗಿದೆ. ಶೀಘ್ರದಲ್ಲಿಯೇ ಎಲ್ಲ ಹುರಿಕಾರರಿಗೆ ಗುರುತಿನ ಚೀಟಿ ನೀಡಲಾಗುವುದು’ ಎಂದು ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷರಾದ ಸವಿತಾ ವಿ.ಅಮರಶೆಟ್ಟಿ ಘೋಷಿಸಿದರು.

ರಾಜ್ಯ ರೇಷ್ಮೆ ಹುರಿಕಾರರೊಂದಿಗೆ ನಗರದಲ್ಲಿ ಬುಧವಾರ ಸಭೆ ನಡೆಸಿದ ಅವರು, ‘ಮಂಡಳಿಯಿಂದ ಉತ್ತಮ ಗುಣಮಟ್ಟದ ರೇಷ್ಮೆ ಒದಗಿಸಲಾಗುವುದು. ಹುರಿ ಮಾಡುವವರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರೋತ್ಸಾಹ ಧನ ನೀಡುವ ಚಿಂತನೆಯೂ ಇದೆ’ ಎಂದು ತಿಳಿಸಿದರು.

ಮಂಡಳಿಯ ಪ್ರಧಾನ ವ್ಯವಸ್ಥಾಪಕಿ ಸುಕುಮಾರಿ, ಮಾಗಡಿ ಶಾಖಾಧಿಕಾರಿ ಕೃಷ್ಣಪ್ಪ, ಹುರಿಕಾರರಾದ ಶಿವಕುಮಾರ್, ಗೋಪಾಲ್, ಎಂ.ಎ.ಸುರೇಶ್‍ಕುಮಾರ್, ಜಗದೀಶ್ ಮತ್ತು ಅನಸೂಯಾ ಬಾಯಿ ಭಾಗವಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.