ಬೆಂಗಳೂರು: ರೇಷ್ಮೆ ಬೆಳೆಗಾರರು, ಉತ್ಪಾದಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿಕೇಂದ್ರ ಬೀಜ ಕಾಯ್ದೆಯಡಿಯಲ್ಲಿ ಆರ್.ವಿ. ಎಂಜಿನಿಯರಿಂಗ್ ಕಾಲೇಜು ಹಾಗೂರಾಷ್ಟ್ರೀಯ ರೇಷ್ಮೆ ಹುಳು ಬೀಜ ಸಂಸ್ಥೆಯು (ಎನ್ಎಸ್‌ಎಸ್‌ಒ) ಜಂಟಿಯಾಗಿ ಆನ್‌ಲೈನ್ ನೋಂದಣಿ ಆಧರಿತ ‘ಇ–ಕುಕೂನ್’ ಮೊಬೈಲ್ ಆ್ಯಪ್ ಅನ್ನುಅಭಿವೃದ್ಧಿಪಡಿಸಿದೆ.
ರೇಷ್ಮೆ ಕೃಷಿ ಇಲಾಖೆ ಹಾಗೂಬೀಜ ವಿಶ್ಲೇಷಕರು ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಕಾರ್ಯದರ್ಶಿರಜಿತ್ ರಂಜನ್ ಒಖಂಡಿಯಾರ್ ಆ್ಯಪ್ ಬಿಡುಗಡೆ ಮಾಡಿದರು.
ಎನ್ಎಸ್‌ಎಸ್‌ಒ ನಿರ್ದೇಶಕ ಆರ್.ಕೆ.ಮಿಶ್ರಾ, ‘ಆ್ಯಪ್ ಸೇವೆ ಬಳಸಲು ಅರಿವು ಮೂಡಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.