ADVERTISEMENT

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಸಿಲ್ಕ್‌ ಮಾರ್ಕ್‌ ಎಕ್ಸ್‌ಪೊಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 16:13 IST
Last Updated 4 ಡಿಸೆಂಬರ್ 2025, 16:13 IST
ಸಿಲ್ಕ್‌ ಮಾರ್ಕ್‌ ಎಕ್ಸ್‌ಪೊದಲ್ಲಿ ಎನ್. ನರೇಶ್ ಬಾಬು ಅವರು ರೇಷ್ಮೆ ಸೀರೆಯನ್ನು ವೀಕ್ಷಿಸಿದರು
ಸಿಲ್ಕ್‌ ಮಾರ್ಕ್‌ ಎಕ್ಸ್‌ಪೊದಲ್ಲಿ ಎನ್. ನರೇಶ್ ಬಾಬು ಅವರು ರೇಷ್ಮೆ ಸೀರೆಯನ್ನು ವೀಕ್ಷಿಸಿದರು   

ಬೆಂಗಳೂರು: ಸಿಲ್ಕ್‌ ಮಾರ್ಕ್‌ ಆರ್ಗನೈಸೇಷನ್‌ ಆಫ್‌ ಇಂಡಿಯಾದ (ಎಸ್‌ಎಂಒಐ) ವತಿಯಿಂದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿರುವ ಸಿಲ್ಕ್‌ ಮಾರ್ಕ್‌ ಎಕ್ಸ್‌ಪೊಗೆ ಗುರುವಾರ ಚಾಲನೆ ನೀಡಲಾಯಿತು. ಈ ಪ್ರದರ್ಶನ ಡಿ. 9ರವರೆಗೆ ನಡೆಯಲಿದೆ.  

ಪ್ರದರ್ಶನದಲ್ಲಿ 10ಕ್ಕೂ ಹೆಚ್ಚು ರಾಜ್ಯಗಳ 12 ರೇಷ್ಮೆ ನೇಯ್ಗೆಯ ಸಮೂಹಗಳನ್ನು ಪ್ರತಿನಿಧಿಸುವ ಅಧಿಕೃತ ಸಿಲ್ಕ್‌ ಮಾರ್ಕ್‌ ಬಳಕೆದಾರರಿಂದ ಸ್ಥಾಪಿಸಿರುವ 43 ಮಳಿಗೆಗಳನ್ನು ಪ್ರಾರಂಭಿಸಲಾಗಿದೆ. ಇಲ್ಲಿ ಟಸ್ಸಾರ್‌ ರೇಷ್ಮೆ ಸೀರೆಗಳ ಜೊತೆಗೆ ಫ್ಯಾನ್ಸಿ ವಿನ್ಯಾಸಗಳು, ಕಾಂತ ವರ್ಕ್‌, ಟಸ್ಸಾರ್‌ ಶರ್ಟ್‌ಗಳು, ಜಾಕೆಟ್‌ಗಳು, ಎರಿ ಸಿಲ್ಕ್‌ ಸಾಕ್ಸ್‌ಗಳು, ರೇಷ್ಮೆ ಬ್ಯಾಗ್‌ಗಳು, ಅಂಗಿಗಳು, ಧೋತಿಗಳು ಸೇರಿದಂತೆ ಹಲವಾರು ಉಡುಪುಗಳ ಪ್ರದರ್ಶನ ಹಾಗೂ ಮಾರಾಟ ಇದೆ. 

ಇದರ ಜೊತೆಗೆ ಸಾಂಪ್ರದಾಯಿಕ ಕಾಂಜಿವರಂ, ಬನಾರಸಿ, ಪೂಚಂಪಳ್ಳಿ, ಮುರ್ಶಿದಾಬಾದ್, ಮೈಸೂರ್ ಸಿಲ್ಕ್‌, ಉಪ್ಪದ ಪೈಥಾನಿ ಇತ್ಯಾದಿ ಸೀರೆಗಳ ಪ್ರದರ್ಶನ ಮತ್ತು ಖರೀದಿಗೆ ಅವಕಾಶ ಇದೆ. ಈ ಪ್ರದರ್ಶನವು ಪ್ರತಿದಿನ ಬೆಳಿಗ್ಗೆ 11ರಿಂದ ಸಂಜೆ 7ರವರೆಗೆ ಇರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. 

ADVERTISEMENT

ಕೇಂದ್ರ ರೇಷ್ಮೆ ಮಂಡಳಿ ಕಾರ್ಯದರ್ಶಿ (ತಾಂತ್ರಿಕ) ಮತ್ತು ಎಸ್‌ಎಂಒಐನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರೇಶ್ ಬಾಬು ಎನ್., ಅವರು ಎಕ್ಸ್‌ಪೊಗೆ ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.