
‘ಸಿಂಪಲ್ ಲೆಕ್ಚರ್’ ಕೃತಕ ಬುದ್ಧಿಮತ್ತೆ (ಎಐ) ಆಧರಿತ ಶಿಕ್ಷಣ ಕಲಿಕಾ ಪ್ಲಾಟ್‌ಫಾರ್ಮ್‌ಗೆ ಚಾಲನೆ ನೀಡಲಾಯಿತು. ಕುಪೇಂದ್ರ ರೆಡ್ಡಿ, ಯೋಗರಾಜ್ ಭಟ್, ಸುರೇಶ್ ನಾಗ್‌ಪಾಲ್, ಅಸ್ಫಿಯಾ ಅಫ್ಜಲ್ ಉಪಸ್ಥಿತರಿದ್ದರು
ಬೆಂಗಳೂರು: ಕೃಪಾ ನಾಲೆಜ್ ಸ್ಟೋರ್ ವತಿಯಿಂದ ‘ಸಿಂಪಲ್ ಲೆಕ್ಚರ್’ ಕೃತಕ ಬುದ್ಧಿಮತ್ತೆ (ಎಐ) ಆಧರಿತ ಶಿಕ್ಷಣ ಕಲಿಕಾ ಪ್ಲಾಟ್‌ಫಾರ್ಮ್‌ಗೆ ಚಾಲನೆ ನೀಡಲಾಯಿತು.
ರಾಜ್ಯಸಭೆಯ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಮಾತನಾಡಿ, ‘ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯ
ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ಎಐ ಆಧಾರಿತ ಕಲಿಕೆಯನ್ನು ಉತ್ತೇಜಿಸಲು ‘ಸಿಂಪಲ್ ಲೆಕ್ಚರ್’ ಸಹಾಯಕವಾಗಲಿದೆ. ಇದು ಬಳಕೆದಾರರ ಸ್ನೇಹಿಯಾಗಿದ್ದು, ಇಂಟರ್‌ಫೇಸ್ ಹಾಗೂ ಬಹಳ ಸಂಕೀರ್ಣವಾದ ವಿಷಯಗಳ ಕಲಿಕೆಯಲ್ಲಿ ವಿದ್ಯಾರ್ಥಿಗಳಿಗೆ ವೈಯಕ್ತಿಕ ಮಟ್ಟದಲ್ಲಿ ಅನುಭವ ನೀಡುವ ಸಾಮರ್ಥ್ಯ ಹೊಂದಿದೆ’ ಎಂದರು.
ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್ ಮಾತನಾಡಿ, ‘ಸೃಜನಶೀಲತೆಯ ವಿವಿಧ ವಿಭಾಗಗಳನ್ನು ತಂತ್ರಜ್ಞಾನ ಹಾಗೂ ಶಿಕ್ಷಣದ ಮೂಲಕ ಪಡೆದುಕೊಳ್ಳಬಹುದು. ನಾವೀನ್ಯ ಎಂಬುದು ವಿದ್ಯಾರ್ಥಿಗಳ ಕಲಿಕೆ ಅನುಭವವನ್ನು ಮರುವ್ಯಾಖ್ಯಾನ ಮಾಡುತ್ತದೆ’ ಎಂದು ತಿಳಿಸಿದರು.
ಕೃಪಾ ನಾಲೆಜ್ ಸ್ಟೋರ್‌ನ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಶಿಕ್ಷಣ ತಜ್ಞ ಸುರೇಶ್ ನಾಗ್‌ಪಾಲ್ ಮಾತನಾಡಿ, ‘ಸಿಂಪಲ್ ಲೆಕ್ಚರ್– ಎಐ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಸಿಂಪಲ್ ಲೆಕ್ಚರ್’ ಸಿಇಒ ಅಸ್ಫಿಯಾ ಅಫ್ಜಲ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.