ಸಾಂದರ್ಭಿಕ ಚಿತ್ರ
ಬೆಂಗಳೂರು: ಇಂದಿರಾನಗರದ ರಾಘವೇಂದ್ರ ಮಠದ ಆವರಣಕ್ಕೆ ಯುವತಿಯೊಬ್ಬಳು ಚಪ್ಪಲಿ ಹಾಕಿ ಹೋಗಿರುವ ವಿಡಿಯೊ ಜಾಲತಾಣದಲ್ಲಿ ಹರಿದಾಡುತ್ತಿದೆ.
ಭಾನುವಾರ ಮುಂಜಾನೆ 5.30ಕ್ಕೆ ಇಂದಿರಾನಗರ ಮೆಟ್ರೊ ನಿಲ್ದಾಣ ಸಮೀಪದಲ್ಲಿರುವ ರಾಘವೇಂದ್ರ ಮಠದ ಬಳಿ ಬಂದ ಯುವತಿ, ಅಲ್ಲೆ ಬಿದ್ದಿದ್ದ ಚಪ್ಪಲಿಯೊಂದನ್ನು ತೆಗೆದು ಕಿಟಕಿ ಮೂಲಕ ಮಠದ ಸಭಾಂಗಣಕ್ಕೆ ಎಸೆದಿದ್ದಾಳೆ. ಯುವತಿಯ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಸಂಬಂಧ ಮಠದ ಅಧಿಕಾರಿಗಳು ಇಂದಿರಾನಗರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.