ADVERTISEMENT

‘ಆರೋಗ್ಯದಲ್ಲಿ ಸ್ಮಾರ್ಟ್‌ ಮತ್ತು ಡಿಜಿಟಲ್ ಯುಗ’

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 21:33 IST
Last Updated 14 ಫೆಬ್ರುವರಿ 2021, 21:33 IST
ಸಾಯಿರಾಮ್ ಆಸ್ಪತ್ರೆಯನ್ನು ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ಉದ್ಘಾಟಿಸಿದರು. ಡಾ.ವಿವೇಕಾನಂದ ಶೆಟ್ಟಿ, ಡಾ.ಬಾಲಕೃಷ್ಣ ಶೆಟ್ಟಿ ಹಾಗೂ ಇತರರು ಇದ್ದರು.
ಸಾಯಿರಾಮ್ ಆಸ್ಪತ್ರೆಯನ್ನು ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ಉದ್ಘಾಟಿಸಿದರು. ಡಾ.ವಿವೇಕಾನಂದ ಶೆಟ್ಟಿ, ಡಾ.ಬಾಲಕೃಷ್ಣ ಶೆಟ್ಟಿ ಹಾಗೂ ಇತರರು ಇದ್ದರು.   

ಬೆಂಗಳೂರು: ‘ಕೋವಿಡ್ ಬಳಿಕ ಆರೋಗ್ಯ ಕ್ಷೇತ್ರದ ಮಹತ್ವರಾಜ್ಯದಲ್ಲಿ ಎಲ್ಲರಿಗೂ ತಿಳಿಯಿತು. ಮುಂದಿನ ದಿನಗಳಲ್ಲಿ ಸ್ಮಾರ್ಟ್‌ ಕ್ಲಿನಿಕ್‌ ಹಾಗೂ ಡಿಜಿಟಲ್‌ ಸಮಾಲೋಚನೆ ಯುಗ ಆರಂಭವಾಗಲಿದೆ’ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ‌ಅಶ್ವತ್ಥನಾರಾಯಣ ತಿಳಿಸಿದರು.

ಬನ್ನೇರುಘಟ್ಟ ರಸ್ತೆಯ ಕೃಷ್ಣ ಕುಟೀರದ ಸಮೀಪ ಸಾಯಿರಾಮ್‌ ಆಸ್ಪತ್ರೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ವೈದ್ಯರು ನಗರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಆಸಕ್ತಿ ತೋರುತ್ತಿದ್ದಾರೆ. ಇದರಿಂದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿನ ಆರೋಗ್ಯ ಸೇವೆಯಲ್ಲಿ ಏರುಪೇರಾಗುತ್ತಿದೆ. ಈಗ ರೋಗಿ ಎಲ್ಲೇ ಇದ್ದರೂ ಆನ್‌ಲೈನ್‌ ಮೂಲಕ ಚಿಕಿತ್ಸೆ ಪಡೆಯಬಹುದು. ಹಿಂದೆ ಡಿಜಿಟಲ್‌ ಕನ್ಸಲ್ಟೇಷನ್‌ಗೆ ಕಾನೂನಿನಲ್ಲಿ ಅವಕಾಶ ಇರಲಿಲ್ಲ. ಈಗ ಅವಕಾಶ ಕಲ್ಪಿಸಲಾಗಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.