
ಬೆಂಗಳೂರು: ಸೆಮಿಕಂಡಕ್ಟರ್ ಎಂಜಿನಿಯರಿಂಗ್ ಮತ್ತು ಇಂಟಿಗ್ರೇಟೆಡ್ ಸರ್ಕ್ಯೂಟ್ ವಿನ್ಯಾಸದಲ್ಲಿ ಮುಂಚೂಣಿಯಲ್ಲಿದ್ದ ನಗರದ ಸ್ಮಾರ್ಟ್‌ಎಸ್‌ಒಸಿ ಸೊಲ್ಯೂಶನ್ಸ್ ಕಂಪನಿಯನ್ನು ಪ್ಲಾಟ್‌ಫಾರ್ಮ್ ಎಂಜಿನಿಯರಿಂಗ್‌ಗೆ ಹೆಸರು ಪಡೆದಿರುವ ವರ್ಚುಸಾ ಕಾರ್ಪೊರೇಷನ್ ಕಂಪನಿ ತನ್ನ ಸ್ವಾಧೀನಕ್ಕೆ ಪಡೆದಿದೆ. ಸೆಮಿ ಕಂಡಕ್ಟರ್ ಉದ್ಯಮದ ವಿಸ್ತರಣೆಗೆ ಈ ಮೂಲಕ ಚಾಲನೆ ದೊರೆತಿದೆ ಎಂದು ಕಂಪನಿ ಹೇಳಿಕೊಂಡಿದೆ.
ಚಿಪ್‌ನಿಂದ ನೆಟ್‌ವರ್ಕ್, ಕ್ಲೌಡ್ ಮತ್ತು ಅಪ್ಲಿಕೇಷನ್‌ವರೆಗೆ ಸಂಪೂರ್ಣ ಡಿಜಿಟಲ್ ತಂತ್ರಜ್ಞಾನ ವ್ಯವಸ್ಥೆಯನ್ನು ಹೊಂದಿರುವ ವರ್ಚುಸಾಗೆ ಈ ಸ್ವಾಧೀನವು ಪ್ರಮುಖ ಘಟ್ಟ ಮತ್ತು ಹೆಗ್ಗುರುತು ಆಗಿದೆ. ವರ್ಚುಸಾದಲ್ಲಿ ಪರಿವರ್ತನೆಗೆ ಕಾರಣವಾಗಿದೆ ಎಂದು ವರ್ಚುಸಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತೇಶ್ ಬಂಗಾ ತಿಳಿಸಿದ್ದಾರೆ.
ಸ್ಮಾರ್ಟ್‌ಎಸ್‌ಒಸಿ ಸೊಲ್ಯೂಶನ್ಸ್‌ನ ಎಲ್ಲ ಉದ್ಯೋಗಿಗಳು ಮುಂದುವರಿಯಲಿದ್ದಾರೆ. ಎಲ್ಲ ಯೋಜನೆಗಳು ಮುಂದುವರಿಯಲಿವೆ. ಗ್ರಾಹಕರೊಂದಿಗಿನ ಒಪ್ಪಂದಗಳು, ಬದ್ಧತೆಗಳು, ಸೇವೆಗಳು ಮುಂದುವರಿಯಲಿವೆ ಎಂದು ಮಾಹಿತಿ ನೀಡಿದ್ದಾರೆ.
ಸ್ಮಾರ್ಟ್ ಸೊಲ್ಯೂಶನ್ಸ್ ಸಿಇಒ ಭರತ್ ದೇಸರೆಡ್ಡಿ ಮಾತನಾಡಿ, ವರ್ಚುಸಾದ ಭಾಗವಾಗಿರುವುದು ಸ್ಮಾರ್ಟ್‌ಎಸ್‌ಒಜಿ ತಂಡ ಮತ್ತು ಗ್ರಾಹಕರಿಗೆ ಅದ್ಭುತ ಅವಕಾಶವಾಗಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.