ADVERTISEMENT

ಧೂಮಪಾನಕ್ಕೆ ಅವಕಾಶ: ಶೀರೊ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗೆ ದಂಡ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 20:42 IST
Last Updated 17 ನವೆಂಬರ್ 2019, 20:42 IST
   

ಬೆಂಗಳೂರು: ನಗರದ ಯು.ಬಿ.ಸಿಟಿಯಲ್ಲಿರುವ ಶಿರೊ ಬಾರ್‌ ಮತ್ತು ರೆಸ್ಟೋರೆಂಟ್‌ನಲ್ಲಿ ಧೂಮಪಾನಕ್ಕೆ ಅವಕಾಶ ಕಲ್ಪಿಸಿದ್ದಕ್ಕೆ ಬಿಬಿಎಂಪಿ₹ 15 ಸಾವಿರ ದಂಡ ವಿಧಿಸಿದೆ. ಇದರ ಪರವಾನಗಿಯನ್ನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿಟ್ಟಿದೆ.

‘ಶಿರೊ ಬಾರ್‌ ಮತ್ತು ರೆಸ್ಟೋರಂಟ್‌ನಲ್ಲಿ 50ಕ್ಕೂ ಅಧಿಕ ಮಂದಿ ಧೂಮಪಾನ ಮಾಡುತ್ತಿರುವ ಬಗ್ಗೆ ನಮಗೆ ದೂರು ಬಂದಿತ್ತು. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಅಲ್ಲಿ ಅನೇಕರು ಧೂಮಪಾನ ಮಾಡುತ್ತಿರುವುದು ಕಂಡು ಬಂತು. ಈ ಬಗ್ಗೆ ವ್ಯವಸ್ಥಾಪಕರನ್ನು ವಿಚಾರಿಸಿದಾಗ ಪಾಲಿಕೆಯೇ ಧೂಮಪಾನ ವಲಯ ಸ್ಥಾಪಿಸುವುದಕ್ಕೆ ಅನುಮತಿ ನೀಡಿದ್ದಾಗಿ ಹೇಳಿದರು. ಆದರೆ ಪಾಲಿಕೆಯು ಅಂತಹ ಅನುಮತಿ ನೀಡಿರಲಿಲ್ಲ. ಹಾಗಾಗಿ ಪಾಲಿಕೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ’ ಎಂದು ತಂಬಾಕು ನಿಯಂತ್ರಣದ ಉನ್ನತ ಮಟ್ಟದ ಸಮಿತಿ ಸದಸ್ಯ ಡಾ.ವಿಶಾಲ್ ರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ. ಆದರೂ ಅನೇಕ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳಲ್ಲಿ ಹಾಗೂ ಪಬ್‌ಗಳಲ್ಲಿ ಇದು ಉಲ್ಲಂಘನೆ ಆಗುತ್ತಿದೆ. ಇಂತಹ ಪ್ರಕರಣ ಕಂಡುಬಂದರೆ ಪಾಲಿಕೆಯ ಗಮನಕ್ಕೆ ತರಬೇಕು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.