ADVERTISEMENT

ಸೋಫಾ ಮಾರಾಟಕ್ಕಿಟ್ಟು ₹ 1.15 ಲಕ್ಷ ಕಳೆದುಕೊಂಡರು

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 0:10 IST
Last Updated 5 ಜೂನ್ 2021, 0:10 IST

ಬೆಂಗಳೂರು: ‘ಸೋಫಾ ಮಾರಾಟಕ್ಕಿದೆ’ ಎಂಬುದಾಗಿ ಓಎಲ್‌ಎಕ್ಸ್‌ ಜಾಲತಾಣದಲ್ಲಿ ಜಾಹೀರಾತು ನೀಡಿದ್ದ ವ್ಯಕ್ತಿಯೊಬ್ಬರು ₹ 1.15 ಲಕ್ಷ ಕಳೆದುಕೊಂಡಿದ್ದು, ಈ ಸಂಬಂಧ ದಕ್ಷಿಣ ವಿಭಾಗ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ಷಯನಗರದ 35 ವರ್ಷದ ನಿವಾಸಿ ವಂಚನೆ ಬಗ್ಗೆ ದೂರು ನೀಡಿದ್ದಾರೆ.

‘ಮನೆಯಲ್ಲಿದ್ದ ಹಳೇ ಸೋಫಾ ಮಾರಾಟ ಮಾಡಲೆಂದು ದೂರುದಾರ ಜಾಹೀರಾತು ನೀಡಿದ್ದರು. ಸೋಫಾ ಖರೀದಿಸುವುದಾಗಿ ಹೇಳಿದ್ದ ವಂಚಕ, ಮುಂಗಡವಾಗಿ ಹಣ ಕಳುಹಿಸುವುದಾಗಿ ತಿಳಿಸಿ ಕ್ಯೂಆರ್‌ ಕೋಡ್ ಕಳುಹಿಸಿದ್ದ. ದೂರುದಾರ ಆ್ಯಪ್‌ನಲ್ಲಿ ಕೋಡ್ ಸ್ಕ್ಯಾನ್ ಮಾಡುತ್ತಿದ್ದಂತೆ, ಅವರ ಬ್ಯಾಂಕ್ ಖಾತೆಯಿಂದ ₹ 1.15 ಲಕ್ಷ ಕಡಿತವಾಗಿದೆ. ಆರೋಪಿ ಸಹ ನಾಪತ್ತೆಯಾಗಿದ್ದಾನೆ’ ಎಂದು ಪೊಲೀಸರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.