ADVERTISEMENT

ಕೆ.ಜಿ ಲೆಕ್ಕದಲ್ಲಿ ಸೀರೆ ಮಾರಾಟ

ಸೌತ್ ಇಂಡಿಯಾ ಶಾಪಿಂಗ್ ಮಾಲ್‌ನಲ್ಲಿ ವಿಶೇಷ ಕೊಡುಗೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 19:43 IST
Last Updated 31 ಜುಲೈ 2019, 19:43 IST
ಸೌತ್ ಇಂಡಿಯಾ ಶಾಪಿಂಗ್ ಮಾಲ್‌ನಲ್ಲಿ ಗ್ರಾಹಕರಿಂದ ಬಟ್ಟೆ ಖರೀದಿ
ಸೌತ್ ಇಂಡಿಯಾ ಶಾಪಿಂಗ್ ಮಾಲ್‌ನಲ್ಲಿ ಗ್ರಾಹಕರಿಂದ ಬಟ್ಟೆ ಖರೀದಿ   

ಬೆಂಗಳೂರು: ಈ ಆಷಾಢ ಮಾಸದಲ್ಲಿ ಜಾರಿಗೆ ತಂದ ಕಿ.ಲೋ ಸೇಲ್ ವಿಶೇಷ ಕೊಡುಗೆಯನ್ನು ಶ್ರಾವಣ ಮಾಸದಲ್ಲೂ ಮುಂದುವರಿಸುವುದಾಗಿ ಸೌತ್ ಇಂಡಿಯಾ ಶಾಪಿಂಗ್ ಮಾಲ್ ಆಡಳಿತ ಮಂಡಳಿ ಘೋಷಿಸಿದೆ.

₹500ರಿಂದ ₹800ಗೆ ಕಿ.ಲೋಸಿಂಥೆಟಿಕ್‌ ಸೀರೆಗಳು ದೊರೆಯಲಿವೆ. ಫ್ಯಾನ್ಸಿ ಹಾಗೂ ಕೈಮಗ್ಗದ ಸೀರೆಗಳು ₹900ನಿಂದ ₹1,800ಗೆ ಲಭ್ಯವಿದೆ.

ಕಾಟನ್ ಸಿಲ್ಕ್ ಸೀರೆಗಳಿಗೆ ₹2,000 ಹಾಗೂ ಪಟ್ಟು ಮಿಶ್ರಿತ ಸೀರೆಗಳಿಗೆ ₹2,900ರಿಂದ ₹3,000 ನಿಗದಿಪಡಿಸಲಾಗಿದೆ. ಪುರುಷರ ಬಟ್ಟೆ, ವಿದೇಶಿ ಬಟ್ಟೆ, ಮಕ್ಕಳ ಬಟ್ಟೆ ಹಾಗೂ ಇನ್ನಿತರ ವಸ್ತ್ರಗಳ ಮೇಲೆ ಶೇ 30ರಿಂದ ಶೇ 66ರಷ್ಟು ಕಡಿತ ಇರಲಿದೆ.

ADVERTISEMENT

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಹೊಚ್ಚ ಹೊಸ ವಸ್ತ್ರಗಳು ಕೂಡ ಲಭ್ಯವಿದೆ. ಈ ಕೊಡುಗೆ ಸೀಮಿತ ಅವಧಿಗೆ ಇರಲಿದೆ ಎಂದು ತಿಳಿಸಲಾಗಿದೆ. ನೆಟ್ಟಕಲಪ್ಪ ಸರ್ಕಲ್, ಬಸವನಗುಡಿ, ಅರೆಕೆರೆ ಸರ್ಕಲ್, ಬನ್ನೇರುಘಟ್ಟ ರಸ್ತೆ ಹಾಗೂ ವೈಟ್‌ಫೀಲ್ಡ್ ರಸ್ತೆಯಲ್ಲಿ ಸೌತ್ ಇಂಡಿಯಾ ಶಾಪಿಂಗ್ ಮಾಲ್‌ಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.