ADVERTISEMENT

ಬೆಂಗಳೂರು: ‘ತಲ್ಲಣಿಸದಿರು ಮನವೇ’ ಚಿಂತನಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 16:01 IST
Last Updated 29 ಆಗಸ್ಟ್ 2025, 16:01 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ರಾಜರಾಜೇಶ್ವರಿ ನಗರ: ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಕೇತೋಹಳ್ಳಿ ಶಾಖಾಮಠದ ವತಿಯಿಂದ ‘ತಲ್ಲಣಿಸದಿರು ಮನವೇ’ ಎಂಬ ವಿಶಿಷ್ಟ ಸಾಂಸ್ಕೃತಿಕ ಚಿಂತನಾ ಕಾರ್ಯಕ್ರಮವನ್ನು ಆಗಸ್ಟ್ 30ರ ಶನಿವಾರದಂದು ಏರ್ಪಡಿಸಲಾಗಿದೆ ಎಂದು ಕರ್ನಾಟಕ ಗ್ಯಾರಂಟಿ ಅನುಷ್ಠಾನ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ತಿಳಿಸಿದರು.

ADVERTISEMENT

‘ಸಾಮಾಜಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳ ವೈಚಾರಿಕ ನೆಲೆಗಟ್ಟಿನ ಚಿಂತಕರ ಚಾವಡಿಯಾಗಿಸುವ ಆಶಯದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕೈಗಾರಿಕೋದ್ಯಮಿ ಆರ್. ಶಿವಕುಮಾರ್, ಕಾರ್ಯಕ್ರಮ ಸಂಚಾಲಕ ಡಾ.ಬಿ.ಮಂಜಪ್ಪ ಮಾಗೋದಿ, ಮನೋಹರ್, ಉಷಾರಾಣಿ, ರಮೇಶ್ ಬಂಡೆ, ಚಂದ್ರು ಬೊಮ್ಮಯ್ಯ, ರಮೇಶ್ ರಾಮೋಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಜಿ.ಮಹೇಶ್, ರಾಜ್ಯ ಕುರುಬರ ಸಂಘದ ನಿರ್ದೇಶಕ ಎಂ.ಸಿ ರಾಜಣ್ಣ, ವೆಂಕಟೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.