
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಜಯ ಗಳಿಸಿದ ತಂಡಗಳಿಗೆ ಮಾಜಿ ಸಚಿವ ಎಚ್.ನಾಗೇಶ್ ಬಹುಮಾನ ವಿತರಿಸಿದರು.
ಕೆ.ಆರ್.ಪುರ: ‘ಕ್ರೀಡೆ ಜಾತಿ, ಮತ ಭೇದವಿಲ್ಲದ ಕ್ಷೇತ್ರವಾಗಿದ್ದು,
ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಪಾಲ್ಗೊಂಡು ಅರೋಗ್ಯ ವೃದ್ಧಿಸಿಕೊಳ್ಳಿ’ ಎಂದು ಮಾಜಿ ಸಚಿವ ಎಚ್.ನಾಗೇಶ್ ಅವರು ಹೇಳಿದರು.
ಕೆ.ಆರ್.ಪುರ ಸಮೀಪದ ಸಾದರಮಂಗಲದಲ್ಲಿ ಮಹದೇವಪುರ ಕೆಪಿಸಿಸಿ ಅಪಾರ್ಟ್‌ಮೆಂಟ್ ಘಟಕ ಹಮ್ಮಿಕೊಂಡಿದ್ದ ಕೆ.ದೊಮ್ಮ
ಸಂದ್ರ ಬ್ಯಾಡ್ಮಿಂಟನ್ ಟೂರ್ನಮೆಂಟ್ ಸೀಸನ್-1 ಉದ್ಘಾಟಿಸಿ ಅವರು ಮಾತನಾಡಿದರು.
‘ಮನೋವಿಕಾಸ ಮತ್ತು ಆತ್ಮಸ್ಥೈರ್ಯ ಬಲಗೊಳ್ಳಲು ಕ್ರೀಡೆ ಸಹಕಾರಿಯಾಗಿದೆ. ಕ್ರೀಡೆ ದೈಹಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ. ಪ್ರತಿಯೊಬ್ಬರೂ ತಮಗೆ ಇಷ್ಟವಾದ ಕ್ರೀಡೆಯಲ್ಲಿ ತೊಡಗಿಕೊಂಡು ಸಾಧನೆ ಮಾಡಬೇಕು’ ಎಂದರು.
ಕೆಪಿಸಿಸಿ ಅಪಾರ್ಟ್‌ಮೆಂಟ್ ಘಟಕದ ಅಧ್ಯಕ್ಷ ಪಿ.ತಮಿಳ್ ಸೆಲ್ವನ್ ಮಾತನಾಡಿದರು.
ಕೆಪಿಸಿಸಿ ಪೂರ್ವ ಜಿಲ್ಲಾ ಅಧ್ಯಕ್ಷ ಡಿ.ಕೆ.ಮೋಹನ್, ಮುಖಂಡರಾದ ನಂದಕುಮಾರ್, ಅಮರನಾಥ್, ಮುನಿಕೃಷ್ಣ, ನವೀನ್ ರೆಡ್ಡಿ ಅವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.