ಕೆ.ಆರ್.ಪುರ: ಇತಿಹಾಸ ಪ್ರಸಿದ್ಧ ಶ್ರೀಕೋಟೆ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವವು ಕೆ.ಆರ್.ಪುರದಲ್ಲಿ ಶನಿವಾರ ನಡೆಯಲಿದೆ.
ಬ್ರಹ್ಮರಥೋತ್ಸವ ಹಿನ್ನೆಲೆಯಲ್ಲಿ ಮಂಗಳವಾರದಿಂದ ಸೋಮವಾರದವರೆಗೆ ಹನುಮೋತ್ಸವ, ಶೇಷವಾಹನತ್ಸೋವ, ಕಲ್ಯಾಣೋತ್ಸವ, ಗರುಡೋತ್ಸವ, ಗಜೇಂದ್ರ ಮೋಕ್ಷ, ಪಾರಾವಾಟೋತ್ಸವ, ವಸಂತೋತ್ಸವ, ಶಯನೋತ್ಸವ, ವಿಶ್ವರೂಪ ದರ್ಶನ, ಹೂವಿನ ಪಲ್ಲಕ್ಕಿ ಕಾರ್ಯಕ್ರಮಗಳು ನಡೆಯಲಿವೆ.
ಪ್ರತಿದಿನ ದೇವರಿಗೆ ಅಭಿಷೇಕ, ಪೂಜೆ, ಹೋಮ ಹವನ, ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ. ಪ್ರತಿದಿನ ಸಂಜೆ, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಸಾಮೂಹಿಕ ದೇವರನಾಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಶನಿವಾರ ರಾತ್ರಿ ಹತ್ತು ಗಂಟೆಗೆ ಕೆ.ಆರ್.ಪುರದ ಪ್ರಮುಖ ಬೀದಿಗಳಲ್ಲಿ 48 ದೇವರುಗಳ ಹೂವಿನ ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ದೇವಸ್ಥಾನದ ಅಧ್ಯಕ್ಷ ಎಲ್.ಮುನಿಸ್ವಾಮಿ, ಪ್ರಧಾನ ಆರ್ಚಕ ಮುರುಳಿಸ್ವಾಮಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.