ಕೆ.ಆರ್.ಪುರ: ‘ಪ್ರತಿಯೊಬ್ಬರೂ ಸನ್ಮಾರ್ಗದ ಪರಿಕಲ್ಪನೆಯನ್ನು ಬಿತ್ತುವಂತಹ ಕೆಲಸ ಮಾಡಬೇಕು’ ಎಂದು ಉಡುಪಿ ಪೇಜಾವರ ಮಠ ಪೀಠಾಧ್ಯಕ್ಷರಾದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಮಹದೇವಪುರ ವಿಧಾನಸಭಾ ಕ್ಷೇತ್ರದ ವರ್ತೂರಿನಲ್ಲಿ ಸ್ವಾಮಿ ವಿವೇಕಾನಂದ ಸೇವಾ ಸಮಿತಿ ಮತ್ತು ವಿಶ್ವ ಹಿಂದೂ ಪರಿಷತ್ತಿನ ಸಹಯೋಗದಲ್ಲಿ ನಡೆದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
‘ಮಾನವೀಯತೆಯ ಮೌಲ್ಯವನ್ನು ಬೆಳೆಸಿಕೊಂಡು, ಮತ್ತೊಬ್ಬರಿಗೆ ನೆರವಾಗುವ ರೀತಿಯಲ್ಲಿ ಸರಳ ಜೀವನ ಶೈಲಿ ರೂಢಿಸಿಕೊಳ್ಳಬೇಕು. ಎಲ್ಲ ಧರ್ಮಗಳನ್ನು ಪ್ರೀತಿಸುವ ಗುಣ ಹೊಂದಬೇಕು’ ಎಂದರು.
‘ಗೋವುಗಳೆಂದರೆ ಪರಮಾತ್ಮನಿಗೆ ಅತ್ಯಂತ ಪ್ರೀತಿ. ಆದಕಾರಣ ಗೋವುಗಳನ್ನು ರಕ್ಷಿಸುವ ಕೆಲಸ ಮಾಡುವ ಮೂಲಕ ಭಗವಂತನ ಅನುಗ್ರಹ ಪಡೆದುಕೊಳ್ಳಬೇಕು’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ, ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಕಾರ್ಯದರ್ಶಿ ಜಗನಾಥ್ ಶಾಸ್ತ್ರಿ, ಕಾರ್ಯಕ್ರಮ ಆಯೋಜಕ ಎನ್.ಪಿ.ಮುನಿರಾಜು, ಮುಖಂಡರಾದ ಮನೋಹರರೆಡ್ಡಿ, ರಾಜಾರೆಡ್ಡಿ, ಶ್ರೀಕೃಷ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.