ADVERTISEMENT

ಸೋಂಕಿತರ ಕುಟುಂಬಗಳಿಗೆ ಪ‍ಡಿತರ ಕಿಟ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 7 ಮೇ 2021, 19:19 IST
Last Updated 7 ಮೇ 2021, 19:19 IST
ಕೋವಿಡ್‌ ರೋಗಿಗಳ ಕುಟುಂಬಗಳಿಗೆ ಸಚಿವ ಸೋಮಶೇಖರ್ ಪಡಿತರ ಕಿಟ್ ವಿತರಿಸಿದರು.
ಕೋವಿಡ್‌ ರೋಗಿಗಳ ಕುಟುಂಬಗಳಿಗೆ ಸಚಿವ ಸೋಮಶೇಖರ್ ಪಡಿತರ ಕಿಟ್ ವಿತರಿಸಿದರು.   

ಬೆಂಗಳೂರು: ಯಶವಂತಪುರ ವ್ಯಾಪ್ತಿಯಲ್ಲಿ ಹೋಂ ಐಸೊಲೇಷನ್‌ನಲ್ಲಿರುವ ಕೋವಿಡ್ ರೋಗಿಗಳ ಕುಟುಂಬಗಳಿಗೆಪಡಿತರ ಕಿಟ್‌ ಹಾಗೂ ಔಷಧಗಳನ್ನು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಶುಕ್ರವಾರ ವಿತರಿಸಿದರು.

‘ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರ ಪರಿಸ್ಥಿತಿ ಕಷ್ಟದಲ್ಲಿರುತ್ತದೆ. ಅವರೊಂದಿಗೆ ಮನೆಯಲ್ಲಿರುವ ಸದಸ್ಯರೂ ಹೊರಗೆ ಬರಲು ಸಾಧ್ಯವಾಗುವುದಿಲ್ಲ. ಇಂತಹ ಐದು ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಉಚಿತವಾಗಿ ಪಡಿತರ ಕಿಟ್ ಹಾಗೂ ಔಷಧ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

‘ಸೋಂಕಿನ ಬಗ್ಗೆ ಭಯ ಬೇಡ. ಸೂಕ್ತ ಚಿಕಿತ್ಸೆ ಪಡೆದುಕೊಂಡರೆ, ಈ ಸೋಂಕು ಗುಣವಾಗಲಿದೆ. ಯಾರೂ ಆತಂಕಗೊಳ್ಳುವುದು ಬೇಡ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.