ನಾಯಿ
ಬೆಂಗಳೂರು: ರಸ್ತೆಯಲ್ಲಿ ಮಲಗಿದ್ದ ಬೀದಿ ನಾಯಿಯ ಮೇಲೆ ಕಾರಿನ ಚಕ್ರ ಹರಿಸಿರುವ ಘಟನೆ ಎಚ್‌ಎಲ್‌ಎಲ್ ಮೂರನೇ ಹಂತದ ಬಿಡಿಎ ಬಡಾವಣೆಯಲ್ಲಿ ನಡೆದಿದೆ. ಈ ಬಗ್ಗೆ ಬಿಡಿಎ ಬಡಾವಣೆಯ ನಿವಾಸಿ ಅಭಿಜಿತ್ ದಾಸ್ ಅವರು ಜೀವನ್ ಬಿಮಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
‘ಆಗಸ್ಟ್ 3ರಂದು ಬಿಡಿಎ ಬಡಾವಣೆಯ ಎರಡನೇ ಕ್ರಾಸ್ ಬಳಿಯ ಬೇಕರಿ ಮುಂಭಾಗದಲ್ಲಿ ಮಲಗಿದ್ದ ನಾಯಿಯ ಮೇಲೆ ಕಾರಿನ ಚಾಲಕ ಉದ್ದೇಶ
ಪೂರ್ವಕವಾಗಿ ಚಕ್ರ ಹರಿಸಿ, ಅದರ ಸಾವಿಗೆ ಕಾರಣರಾಗಿದ್ದಾರೆ. ಬೀದಿ ನಾಯಿ ಸಾವಿಗೆ ಕಾರಣರಾದ ಅವರನ್ನು ಕೂಡಲೇ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.