ADVERTISEMENT

ಸುಭಾಷ್ ಚಂದ್ರ ಬೋಸ್ ಜನ್ಮದಿನಾಚರಣೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 18:29 IST
Last Updated 11 ಫೆಬ್ರುವರಿ 2019, 18:29 IST
ಸುಭಾಷ್ ಚಂದ್ರ ಬೋಸ್ ಭಾವಚಿತ್ರಕ್ಕೆ ಕಾಂಗ್ರೆಸ್ ಮುಖಂಡ ಬಾಬು ಸೆಲ್ವಂ ಪುಷ್ಪ ನಮನ ಸಲ್ಲಿಸಿದರು. ಸೆಂಥಿಲ್ ಕುಮಾರ್ ಇದ್ದರು.
ಸುಭಾಷ್ ಚಂದ್ರ ಬೋಸ್ ಭಾವಚಿತ್ರಕ್ಕೆ ಕಾಂಗ್ರೆಸ್ ಮುಖಂಡ ಬಾಬು ಸೆಲ್ವಂ ಪುಷ್ಪ ನಮನ ಸಲ್ಲಿಸಿದರು. ಸೆಂಥಿಲ್ ಕುಮಾರ್ ಇದ್ದರು.   

ಕೆ.ಆರ್‌.ಪುರ: ‘ಬ್ರಿಟಿಷರ ವಸಾಹತುಶಾಹಿ ಆಡಳಿತದಿಂದ ಭಾರತಕ್ಕೆ ಮುಕ್ತಿ ಸಿಗಲು ನೇತಾಜಿ ಅವರು ಪ್ರಮುಖ ಪಾತ್ರ ವಹಿಸಿದ್ದರು’ ಎಂದು ವಿಜಿನಾಪುರದ ಕಾಂಗ್ರೆಸ್‌ನ ಹಿರಿಯ ಮುಖಂಡ ಬಾಬು ಸೇಲ್ವಂ ಹೇಳಿದರು.

ಕೆ.ಆರ್.ಪುರ ಸಮೀಪದ ಲಕ್ಷ್ಮಣಮೂರ್ತಿ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಸುಭಾಷ್ ಚಂದ್ರ ಬೋಸ್ ಅವರ 122ನೇ ಜಯಂತಿ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ಬೋಸ್ ಅವರು ಭಾರತದ ವೀರ ಸೇನಾನಿ ಮತ್ತು ದಿಟ್ಟ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಸುಭಾಷ್ ಚಂದ್ರ ಬೋಸ್ ಚಿಕ್ಕಂದಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದ ಸೆಳೆತಕ್ಕೆ ಒಳಗಾಗಿ ಚಳವಳಿಗೆ ಧುಮುಕಿದರು’ ಎಂದರು.

ADVERTISEMENT

ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆದ ಸಶಸ್ತ್ರ ಸಂಘರ್ಷದಲ್ಲಿ ಪಾಲ್ಗೊಂಡಿದ್ದ ಕನ್ನಡಿಗ ಸೈನಿಕರಾದ ಜಯರಾಮ್ ಮತ್ತು ಚೌಡಪ್ಪ ಅವರನ್ನು ಸನ್ಮಾನಿಸಲಾಯಿತು ಬೋಸ್ ಜೀವನಾಧಾರಿತ ಪುಸ್ತಕವನ್ನು ವಿತರಿಸಲಾಯಿತು. ಸೆಂಥಿಲ್ ಕುಮಾರ್, ಅಮಾನುಲ್ಲಾ, ಸೆಂಥೀಲ್ ಕುಮಾರ್, ಪ್ರಕಾಶ್, ಹೃದಯನಾಥ್ ನಾಗರಾಜು, ಕೇಶವ್, ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.