ADVERTISEMENT

ಬೈಕ್‌ನಲ್ಲಿ 38 ಸಾವಿರ ಕಿ.ಮೀ. ಕ್ರಮಿಸಿದ ಸುಹಾಸ್‌

ಐದು ತಿಂಗಳ ಅವಧಿಯಲ್ಲಿ ಅಮೆರಿಕದ ಡೆಟ್ರಾಯಿಟ್‌ನಿಂದ 16 ದೇಶಗಳ ಸುತ್ತಿದ ಬೆಂಗಳೂರಿನ ಯುವಕ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 21:48 IST
Last Updated 3 ಸೆಪ್ಟೆಂಬರ್ 2022, 21:48 IST
ಸುಹಾಸ್ ಶಾಸ್ತ್ರಿ
ಸುಹಾಸ್ ಶಾಸ್ತ್ರಿ   

ಬೆಂಗಳೂರು: ಬೆಂಗಳೂರಿನ ಸುಹಾಸ್ ಶಾಸ್ತ್ರಿ ಅವರು ಅಮೆರಿಕದ ಡೆಟ್ರಾಯಿಟ್‌ನಲ್ಲಿ ಆಟೊಮೊಬೈಲ್ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, 5 ತಿಂಗಳಲ್ಲಿ ಬೈಕ್‌ನಲ್ಲಿ 38 ಸಾವಿರ ಕಿ.ಮೀ. ಕ್ರಮಿಸಿ, 16 ದೇಶ ಸುತ್ತಿ ಸಾಧನೆ ಮಾಡಿದ್ದಾರೆ.

ಕಾಲೇಜು ದಿನಗಳಿಂದಲೂ ಬೈಕ್ ಪ್ರವಾಸ ಸುಹಾಸ್‌ ಅವರ ನೆಚ್ಚಿನ ಹವ್ಯಾಸ. ಬೆಂಗಳೂರಿನಲ್ಲಿದ್ದಾಗ ಅವರು ಭಾರತದಾದ್ಯಂತ ಬೈಕ್‌ನಲ್ಲಿ ಸಂಚರಿಸಿದ್ದರು. ಉದ್ಯೋಗ ನಿಮಿತ್ತ ಅಮೆರಿಕಕ್ಕೆ ತೆರಳಿದ ಮೇಲೆ, ಉತ್ತರ ಅಮೆರಿಕ ಹಾಗೂ ದಕ್ಷಿಣ ಅಮೆರಿಕವನ್ನು ಸಾಂಸ್ಕೃತಿಕ, ಭೌಗೋಳಿಕ, ಸಾಮಾಜಿಕವಾಗಿ ಅರಿಯಲು ಬೈಕ್‌ನಲ್ಲಿ ಏಕಾಂಗಿಯಾಗಿ ಪ್ರವಾಸ ಮಾಡುವುದರ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ.

‘ಪೋರ್ಟ್‌ ಲ್ಯಾಂಡ್‌ನಿಂದ ಸ್ಯಾನ್ ಹೋಸೆಗೆ ಒಂದೇ ದಿನ ಸುಹಾಸ್ 1,150 ಕಿ.ಮೀ ಕ್ರಮಿಸಿದ್ದು ವಿಶೇಷ. ಮೆಕ್ಸಿಕೊ ಮಾದಕ ದ್ರವ್ಯಗಳ ದಂಧೆಗೆ, ಅಪಹರಣ, ಕೊಲೆ ಮತ್ತಿತರ ಅಪರಾಧಗಳಿಗೆ ಕುಖ್ಯಾತಿ ಪಡೆದಿದೆ. ಆದರೆ, ನನ್ನ ಅನುಭವದ ಪ್ರಕಾರ ಮೆಕ್ಸಿಕನ್ನರು ಸ್ನೇಹಪ್ರಿಯರು, ಸಹಾಯಹಸ್ತ ಚಾಚುವವರು ಹಾಗೂ ಆತಿಥ್ಯಕ್ಕೆ ಹೆಸರಾದವರು’ ಎಂದು ಸುಹಾಸ್ ಹೇಳಿದ್ದಾರೆ.

ADVERTISEMENT

‘ಮೆಕ್ಸಿಕೊ ನಗರದ ಟ್ರಾಫಿಕ್ ಬೆಂಗಳೂರಿಗಿಂತ ಕೆಟ್ಟದಾಗಿದೆ. ಈ ಮಧ್ಯೆ ಕರ್ತವ್ಯದ ತುರ್ತು ಕರೆಗೆ ಓಗೊಟ್ಟು ಮೆಕ್ಸಿಕೊದಿಂದ ಡೆಟ್ರಾಯಿಟ್‌ಗೆ ಹಿಂತಿರುಗಬೇಕಾಯಿತು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.