
ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಲೇಖಕಿ ಆರ್. ಸುನಂದಮ್ಮ ಜಯಶೀಲರಾಗಿದ್ದಾರೆ.
ನಿರ್ಮಲಾ ಸಿ. ಎಲಿಗಾರ್ ಪ್ರತಿಸ್ಪರ್ಧಿಯಾಗಿದ್ದರು. ಬೆಂಗಳೂರಿನ ಶಂಕರಪುರದಲ್ಲಿರುವ ಅಶೋಕ ಶಿಶುವಿಹಾರದಲ್ಲಿ ಭಾನುವಾರ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಿತು.
ಸುನಂದಮ್ಮ ಅವರು 471 ಮತ ಪಡೆದರೆ, ನಿರ್ಮಲಾ ಅವರು 282 ಮತಗಳನ್ನು ಗಳಿಸಿದರು. 189 ಮತಗಳ ಅಂತರದಿಂದ ಸುನಂದಮ್ಮ ಜಯಶೀಲರಾಗಿರುವುದಾಗಿ ಚುನಾವಣಾಧಿಕಾರಿ ಆರ್. ಪ್ರತಿಭಾ ಘೋಷಿಸಿದರು.
ಒಟ್ಟು 757 ಮಂದಿ ಮತದಾನ ಮಾಡಿದ್ದು, ನಾಲ್ಕು ಮತಗಳು ಅಸಿಂಧುಗೊಂಡಿದ್ದವು. ಬೆಂಗಳೂರು ಹೊರತುಪಡಿಸಿ ಇತರೆ ಜಿಲ್ಲೆಗಳಿಂದ ಅಂಚೆ ಮೂಲಕ ಮತದಾನ ಪ್ರಕ್ರಿಯೆ ನಡೆಸಲಾಗಿತ್ತು. ಬೆಂಗಳೂರಿನಲ್ಲಿ ಪೊಲೀಸ್ ಬಂದೋಬಸ್ತ್‌ನಲ್ಲಿ ಮತದಾನ ಪ್ರಕ್ರಿಯೆ ಭಾನುವಾರ ನಡೆಯಿತು.
ಅಧ್ಯಕ್ಷರ ಅಧಿಕಾರ ಅವಧಿ ಮೂರು ವರ್ಷಗಳಾಗಿದ್ದು, ಅವರೇ ಕಾರ್ಯಕಾರಿ ಸಮಿತಿ ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.