ADVERTISEMENT

ಮೆಟ್ರೊ ನಿಲ್ದಾಣಗಳಲ್ಲಿ ಬ್ಯಾಟರಿ ಕೇಂದ್ರ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 19:36 IST
Last Updated 7 ಡಿಸೆಂಬರ್ 2022, 19:36 IST
ಸ್ವಾಪ್ ಬ್ಯಾಟರಿ ಶೇರಿಂಗ್ ಕೇಂದ್ರವನ್ನು ಅಂಜುಂ ಪರ್ವೇಜ್ ಮತ್ತು ಕಿಯೋಶಿ ಇಟೊ ಉದ್ಘಾಟಿಸಿದರು. ಬಿಎಂಆರ್‌ಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ(ಕಾರ್ಯಾಚರಣೆ) ಎ.ಎಸ್.ಶಂಕರ್,  ನಿರ್ದೇಶಕಿ(ಸಂಪರ್ಕ ಮತ್ತು ಆಸ್ತಿ ನಿರ್ವಹಣೆ) ಕಲ್ಪನಾ ಕಟಾರಿಯಾ, ತಂತ್ರಜ್ಞಾನ ಮತ್ತು ಅಭಿವೃದ್ಧಿ ಉಪಾಧ್ಯಕ್ಷ ಟೊಮೊಹಿಡೆ ಹರಗುಚಿ, ಸಹಾಯಕ ಉಪಾಧ್ಯಕ್ಷ(ಕಾರ್ಯಾಚರಣೆ) ಸಂದೀಪ್ ಸಂಸನ್ವಾಲ್ ಇದ್ದರು

ಬೆಂಗಳೂರು: ವಿದ್ಯುತ್ ಚಾಲಿತ ವಾಹನಗಳಿಗಾಗಿ ಬ್ಯಾಟರಿ ಬದಲಾಯಿಸುವ ಕೇಂದ್ರಗಳನ್ನು ಎಲ್ಲ ಮೆಟ್ರೊ ರೈಲು ನಿಲ್ದಾಣಗಳ ಬಳಿ ನಿರ್ಮಿಸಲು ಬಿಎಂಆರ್‌ಸಿಎಲ್ ಉದ್ದೇಶಿಸಿದ್ದು, ಮೊದಲ ಹಂತದಲ್ಲಿ ಐದು ನಿಲ್ದಾಣಗಳಲ್ಲಿ ಈ ಕೇಂದ್ರಕ್ಕೆ ಚಾಲನೆ ನೀಡಿದೆ.

ಕೆ.ಆರ್. ಮಾರುಕಟ್ಟೆ, ನ್ಯಾಷನಲ್ ಕಾಲೇಜು, ಬನಶಂಕರಿ, ಟ್ರಿನಿಟಿ ಮತ್ತು ಬೈಯಪ್ಪನಹಳ್ಳಿ ರೈಲು ನಿಲ್ದಾಣಗಳಲ್ಲಿ ಈ ಸೇವೆಯನ್ನು ಆರಂಭಿಸಿದೆ. ಹೊಂಡಾ ಕಂಪನಿ ಜತೆ ಒಡಂಬಡಿಕೆ ಮಾಡಿಕೊಂಡಿದ್ದು, ಬನಶಂಕರಿ ನಿಲ್ದಾಣದಲ್ಲಿ ತೆರೆದಿರುವ ಕೇಂದ್ರವನ್ನು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಹಾಗೂ ಹೋಂಡಾ ಪವರ್ ಪ್ಯಾಕ್ ಎನರ್ಜಿ ಇಂಡಿಯಾ ಅಧ್ಯಕ್ಷ ಕಿಯೋಶಿ ಇಟೊ ಅವರು ಬುಧವಾರ ಉದ್ಘಾಟಿಸಿದರು.

‘ಎಲೆಕ್ಟ್ರಿಕ್ ಆಟೊರಿಕ್ಷಾಗಳಿಗೆ ಈ ಬ್ಯಾಟರಿ ಬಳಕೆ ಮಾಡಿಕೊಳ್ಳಬಹುದಾಗಿದೆ. ವಿದ್ಯುತ್ ಚಾಲಿತ ವಾಹನಗಳ ಸಾರಿಗೆ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಈ ಸೇವೆ ಆರಂಭಿಸಲಾಗಿದೆ. ಮೆಟ್ರೊ ಫೀಡರ್‌ ಸೇವೆಗೆ ಅನುಕೂಲ ಆಗಲಿದೆ’ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.