ADVERTISEMENT

ನಾಯಕರ ಹಿಂಬಾಲಕರಿಗಿಲ್ಲ ಸಿಂಡಿಕೇಟ್ ಸೀಟು: ಸಚಿವ ಜಿ.ಟಿ.ದೇವೇಗೌಡ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2018, 19:27 IST
Last Updated 5 ಅಕ್ಟೋಬರ್ 2018, 19:27 IST
ಅಂಬೇಡ್ಕರ್ ಸೇವಾ ಪ್ರಶಸ್ತಿ ಪುರಸ್ಕೃತರಾದ ಜನಪದ ಗಾಯಕ ಗೊಲ್ಲಹಳ್ಳಿ ಶ್ರೀನಿವಾಸ್, ಸಾಲುಮರದ ತಿಮ್ಮಕ್ಕ ಹಾಗೂ ಲೇಖಕ ಕೆ.ರಾಮಯ್ಯ ಅವರನ್ನು ಕುಲಪತಿ ಪ್ರೊ. ಕೆ.ಆರ್.ವೇಣುಗೋಪಾಲ್ ಸನ್ಮಾನಿಸಿದರು. ಕುಲಸಚಿವರಾದ ಬಿ.ಕೆ.ರವಿ ಮತ್ತು ಪ್ರೊ.ಶಿವರಾಜು ಇದ್ದಾರೆ.
ಅಂಬೇಡ್ಕರ್ ಸೇವಾ ಪ್ರಶಸ್ತಿ ಪುರಸ್ಕೃತರಾದ ಜನಪದ ಗಾಯಕ ಗೊಲ್ಲಹಳ್ಳಿ ಶ್ರೀನಿವಾಸ್, ಸಾಲುಮರದ ತಿಮ್ಮಕ್ಕ ಹಾಗೂ ಲೇಖಕ ಕೆ.ರಾಮಯ್ಯ ಅವರನ್ನು ಕುಲಪತಿ ಪ್ರೊ. ಕೆ.ಆರ್.ವೇಣುಗೋಪಾಲ್ ಸನ್ಮಾನಿಸಿದರು. ಕುಲಸಚಿವರಾದ ಬಿ.ಕೆ.ರವಿ ಮತ್ತು ಪ್ರೊ.ಶಿವರಾಜು ಇದ್ದಾರೆ.   

ಬೆಂಗಳೂರು: ‘ರಾಜಕೀಯ ನಾಯಕರ ಹಿಂಬಾಲಕರಿಗೆ ಸಿಂಡಿಕೇಟ್ ಸದಸ್ಯತ್ವ ನೀಡುವುದಿಲ್ಲ. ಅರ್ಹ ಶಿಕ್ಷಣ ತಜ್ಞರನ್ನು ಈ ಹುದ್ದೆಗಳಿಗೆ ನೇಮಿಸಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದ ಡಾ. ಬಿ.ಆರ್.ಅಂಬೇಡ್ಕರ್ ಅವರ 127ನೇ ಜನ್ಮದಿನಾಚರಣೆ ಹಾಗೂ ಅಂಬೇಡ್ಕರ್ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಜನಪದ ಗಾಯಕ ಗೊಲ್ಲಹಳ್ಳಿ ಶ್ರೀನಿವಾಸ್, ಸಾಲುಮರದ ತಿಮ್ಮಕ್ಕ ಹಾಗೂ ಲೇಖಕ ಕೆ.ರಾಮಯ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ಸಂವಿಧಾನದ ಪ್ರಕಾರ ಎಲ್ಲರೂ ಸಮಾನರು. ಪ್ರತಿಯೊಬ್ಬರಿಗೂ ಕೇವಲ ಒಂದು ಮತದ ಹಕ್ಕನ್ನಷ್ಟೇ ನೀಡಲಾಗಿದೆ. ಮತದಾನದ ಹಕ್ಕನ್ನು ಸಮರ್ಪಕವಾಗಿ ಬಳಸಿಕೊಂಡಿದ್ದರೆ ಈ ರಾಷ್ಟ್ರದಲ್ಲಿ ದಲಿತರೊಬ್ಬರು ಎಂದೋ ಪ್ರಧಾನಿಯಾಗುತ್ತಿದ್ದರು’ ಎಂದು ಹೇಳಿದರು.

‘ಶಿಕ್ಷಣವೊಂದೇ ಈ ಮಾರಕ ಜಾತಿ ವ್ಯವಸ್ಥೆಯನ್ನು ಬುಡ ಸಮೇತ ಕಿತ್ತೊಗೆಯಲು ಇರುವ ಏಕೈಕ ಮಾರ್ಗ. ದೇಶದ ಆರ್ಥಿಕ ವ್ಯವಸ್ಥೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಎಲ್ಲಾ ವರ್ಗಗಳ ಸಹಭಾಗಿತ್ವ ಅತ್ಯಂತ ಅವಶ್ಯಕ’ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.